Publish Date: Fri, 01 Apr 2022 (11:14 IST)
Updated Date: Fri, 01 Apr 2022 (11:17 IST)
ಮುಂಬೈ: ಮದುವೆ ಸಂಭ್ರಮವೆಲ್ಲಾ ಮುಗಿಸಿಕೊಂಡು ಆಸ್ಟ್ರೇಲಿಯಾ ಮೂಲದ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್ ವೆಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇರ್ಪಡೆಯಾಗುತ್ತಿದ್ದಾರೆ.
ಆರ್ ಸಿಬಿ ಈಗಾಗಲೇ ಎರಡು ಪಂದ್ಯಗಳನ್ನಾಡಿದ್ದು ಒಂದು ಗೆಲುವು ಕಂಡಿದೆ. ಇದೀಗ ಮ್ಯಾಕ್ಸ್ ವೆಲ್ ಆಗಮನ ಆರ್ ಸಿಬಿ ಬ್ಯಾಟಿಂಗ್ ಗೆ ಬಲ ತುಂಬಲಿದೆ.
ಇನ್ ಸ್ಟಾಗ್ರಾಂನಲ್ಲಿ ತಾವು ಆರ್ ಸಿಬಿ ವಾಪಸಾಗುತ್ತಿರುವ ಬಗ್ಗೆ ಮ್ಯಾಕ್ಸ್ ವೆಲ್ ಬರೆದುಕೊಂಡಿದ್ದಾರೆ. ಇಂದಿನಿಂದ ಅವರು ಆರ್ ಸಿಬಿ ತಂಡ ಕೂಡಿಕೊಳ್ಳಲಿದ್ದಾರೆ.