Publish Date: Fri, 01 Apr 2022 (08:40 IST)
Updated Date: Fri, 01 Apr 2022 (08:58 IST)
ಮುಂಬೈ: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ನಿನ್ನೆಯ ಪಂದ್ಯವನ್ನು 6 ವಿಕೆಟ್ ಗಳಿಂದ ಸೋತ ಚೆನ್ನೈ ಸೂಪರ್ ಕಿಂಗ್ಸ್ ಸತತ ಎರಡನೇ ಸೋಲು ಅನುಭವಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 7 ವಿಕೆಟ್ ನಷ್ಟಕ್ಕೆ 210 ರನ್ ಗಳ ಬೃಹತ್ ಮೊತ್ತ ಪೇರಿಸಿತು. ರಾಬಿನ್ ಉತ್ತಪ್ಪ 50, ಮೊಯಿನ್ ಅಲಿ 35, ಶಿವಂ ದುಬೆ 49, ಅಂಬಟಿ ರಾಯುಡು 27 ರನ್ ಗಳಿಸಿದರು.
ಈ ಬೃಹತ್ ಮೊತ್ತ ಬೆನ್ನತ್ತಿದ ಲಕ್ನೋ ಆರಂಭ ಉತ್ತಮವಾಗಿತ್ತು. ನಾಯಕ ಕೆಎಲ್ ರಾಹುಲ್ 40, ಕ್ವಿಂಟನ್ ಡಿ ಕಾಕ್ 61 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಬಳಿಕ ಎವಿನ್ ಲೆವಿಸ್ ಅಜೇಯ 55 ರನ್ ಗಳಿಸಿ ಮಿಂಚಿದರು. ಇದರಿಂದಾಗಿ ಲಕ್ನೋ 19.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿ ಪಂದ್ಯ ತನ್ನದಾಗಿಸಿಕೊಂಡಿತು.