Publish Date: Fri, 01 Apr 2022 (09:45 IST)
Updated Date: Fri, 01 Apr 2022 (09:47 IST)
ಮುಂಬೈ: ಟೀಂ ಇಂಡಿಯಾ ಮತ್ತು ಐಪಿಎಲ್ ನಾಯಕತ್ವದಿಂದ ಕೆಳಗಿಳಿದಿರುವ ವಿರಾಟ್ ಕೊಹ್ಲಿ ಬ್ರ್ಯಾಂಡ್ ಮೌಲ್ಯವೂ ಕೊಂಚ ಇಳಿಕೆಯಾಗಿದೆ.
ಇತ್ತೀಚೆಗಿನ ದಿನಗಳಲ್ಲಿ ಕೊಹ್ಲಿ ಫಾರ್ಮ್ ಕೂಡಾ ಅಷ್ಟಕ್ಕಷ್ಟೇ ಇದೆ. ಹೀಗಾಗಿ ಅವರ ಬ್ರ್ಯಾಂಡ್ ಮೌಲ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಕೊಂಚ ಹಿನ್ನಡೆ ಕಂಡುಬರುತ್ತಿದೆ.
2020 ರಲ್ಲಿ ಕೊಹ್ಲಿ ಬ್ರ್ಯಾಂಡ್ ಮೌಲ್ಯ ವಾರ್ಷಿಕ 238 ಮಿಲಿಯನ್ ಡಾಲರ್ ಇತ್ತು. ಈಗ ಇದು ಕುಸಿದ 185 ಮಿಲಿಯನ್ ಡಾಲರ್ ಗೆ ಬಂದು ತಲುಪಿದೆ. ಹಾಗಿದ್ದರೂ ಭಾರತೀಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಅವರೇ ನಂ.1 ಸ್ಥಾನದಲ್ಲಿದ್ದಾರೆ.