Select Your Language

Notifications

webdunia
webdunia
webdunia
webdunia

Funny Video: ಏನಲೋ.. ಹಿಡಿಯಕ್ಕಾಗಲ್ವಾ...: ಅಪರೂಪಕ್ಕೆ ಬೌಲಿಂಗ್ ಮಾಡಿ ಮಯಾಂಕ್ ಅಗರ್ವಾಲ್ ಗೆ ಬೈದ ಕೆಎಲ್ ರಾಹುಲ್

KL Rahul bowling
Photo Credit: X
ಹುಬ್ಬಳ್ಳಿ: ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ಇಂದು ಗೆಲ್ಲದೇ ಹೋದರೂ ಕೆಎಲ್ ರಾಹುಲ್ ಬೌಲಿಂಗ್ ಮಾಡಿದ್ದು ಅಭಿಮಾನಿಗಳ ಗಮನ ಸೆಳೆದಿದೆ. ಬೌಲಿಂಗ್ ಮಾಡಿ ಗೆಳೆಯ ಮಯಾಂಕ್ ಗೆ ಮೈದಾನದಲ್ಲೇ ಬೈದಿರುವ ರಾಹುಲ್ ವಿಡಿಯೋ ಈಗ ವೈರಲ್ ಆಗಿದೆ.

ಕೆಎಲ್ ರಾಹುಲ್ ಒಬ್ಬ ಪರಿಪೂರ್ಣ ಬ್ಯಾಟಿಗ. ಅವರು ಭಾರತದ ಪರ ಬೌಲಿಂಗ್ ಮಾಡಿದ್ದೇ ಇಲ್ಲ. ಇದೀಗ ರಣಜಿ ಟ್ರೋಫಿಯಲ್ಲಿ 10 ವರ್ಷಗಳ ಬಳಿಕ ಬೌಲಿಂಗ್ ಮಾಡಿದ್ದಾರೆ. ಇಂದು ಅಂತಿಮ ದಿನ ಹೇಗಿದ್ದರೂ ಫಲಿತಾಂಶ ಬರಲ್ಲ ಎಂದು ಗೊತ್ತಾದ ಮೇಲೆ 80 ಓವರ್ ಗಳ ನಂತರ ಕೆಎಲ್ ರಾಹುಲ್ ಗೆ ಕರ್ನಾಟಕ ನಾಯಕ ದೇವದತ್ತ ಪಡಿಕ್ಕಲ್ ಬೌಲಿಂಗ್ ಮಾಡಲು ಸೂಚಿಸಿದರು.

ಅಪರೂಪಕ್ಕೆ ಕೆಎಲ್ ರಾಹುಲ್ ಬೌಲಿಂಗ್ ಮಾಡಿದ್ದು ಅಭಿಮಾನಿಗಳಿಗೂ ಸರ್ಪೈಸ್ ಆಗಿತ್ತು. ಮೊದಲ ಓವರ್ ಏನೋ ರಾಹುಲ್ ಕೇವಲ 3 ರನ್ ನೀಡಿದರು. ಆದರೆ ಎರಡನೇ ಓವರ್ ನಲ್ಲಿ ಚೆನ್ನಾಗಿಯೇ ಚಚ್ಚಿಸಿಕೊಂಡಿದ್ದಾರೆ.

ಅದರಲ್ಲೂ ರಾಹುಲ್ ಎಸೆತದಲ್ಲಿ ಬ್ಯಾಟ್ ಗೆ ತಾಗಿ ಬಾಲ್ ವಿಕೆಟ್ ಕೀಪರ್ ಪಕ್ಕದಲ್ಲೇ ನಿಂತಿದ್ದ ಮಯಾಂಕ್ ಅಗರ್ವಾಲ್ ಕೈ ಸ್ಪರ್ಶಿಸಿ ಬೌಂಡರಿ ಗೆರೆಯತ್ತ ಹೋಗಿತ್ತು. ಮಯಾಂಕ್ ಕ್ಯಾಚ್ ಹಿಡಿಯದೇ ಇದ್ದ ಕಾರಣಕ್ಕೆ ರಾಹುಲ್ ಗೆ ಸಿಟ್ಟು ಬಂದಿತ್ತು. ಏನಲೋ.. ಎಂದು ಮಯಾಂಕ್ ಗೆ ಬೈದಿದ್ದಾರೆ. ಮಯಾಂಕ್ ಈ ವಿಚಾರವನ್ನು ಚಿಕ್ಕಮಕ್ಕಳಂತೆ ತಂಡದ ನಾಯಕ ದೇವದತ್ತ ಪಡಿಕ್ಕಲ್ ಗೆ ದೂರು ಹೇಳಿದ್ದಾರೆ. ಈ ಫನ್ನಿ ವಿಡಿಯೋ ಇಲ್ಲಿದೆ ನೋಡಿ.


Share this Story:

Follow Webdunia kannada

ಮುಂದಿನ ಸುದ್ದಿ

Ranji Trophy Final: ಮೊದಲ ಬಾರಿಗೆ ರಣಜಿ ಗೆದ್ದ ಜಮ್ಮು ಕಾಶ್ಮೀರ: ಕರ್ನಾಟಕಕ್ಕೆ ನಿರಾಸೆ