Select Your Language

Notifications

webdunia
webdunia
webdunia
webdunia

Ranji Trophy Final: ಮೊದಲ ಬಾರಿಗೆ ರಣಜಿ ಗೆದ್ದ ಜಮ್ಮು ಕಾಶ್ಮೀರ: ಕರ್ನಾಟಕಕ್ಕೆ ನಿರಾಸೆ

Jammu Kashmir Ranji champions
Photo Credit: X
ಹುಬ್ಬಳ್ಳಿ: ಕರ್ನಾಟಕ ವಿರುದ್ಧ ಫೈನಲ್ ಪಂದ್ಯವನ್ನು ಡ್ರಾ ಮಾಡಿಕೊಂಡ ಜಮ್ಮು ಕಾಶ್ಮೀರ ತಂಡ ಮೊದಲ ಬಾರಿಗೆ ರಣಜಿ ಟ್ರೋಫಿ ಗೆದ್ದು ಬೀಗಿದೆ. ಇತ್ತ ಕರ್ನಾಟಕಕ್ಕೆ ನಿರಾಸೆಯಾಗಿದೆ.

ಮೊದಲ ಇನಿಂಗ್ಸ್ ನಲ್ಲಿ ಜಮ್ಮು ಕಾಶ್ಮೀರ 584 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಕರ್ನಾಟಕ ಮೊದಲ ಇನಿಂಗ್ಸ್ ನಲ್ಲಿ ಕೇವಲ 294 ರನ್ ಗಳಿಗೆ ಆಲೌಟ್ ಆಗಿತ್ತು. ಎರಡನೇ ಇನಿಂಗ್ಸ್ ನಲ್ಲಿ ಜಮ್ಮು ಕಾಶ್ಮೀರ ಇಂದು ಕೊನೆಯ ದಿನ 4 ವಿಕೆಟ್ ನಷ್ಟಕ್ಕೆ 342 ರನ್ ಗಳಿಸಿತ್ತು. ಕೊನೆಗೆ ಫಲಿತಾಂಶ ಬರುವ ಸೂಚನೆಯಿಲ್ಲದ ಕಾರಣ ಎರಡೂ ತಂಡದ ನಾಯಕರು ಹ್ಯಾಂಡ್ ಶೇಕ್ ಮಾಡುವ ಮೂಲಕ ಡ್ರಾ ಮಾಡಿಕೊಳ್ಳಲು ಒಪ್ಪಿದರು.

ಮೊದಲ ಇನಿಂಗ್ಸ್ ನಲ್ಲಿ ಜಮ್ಮು ಕಾಶ್ಮೀರ ಭರ್ಜರಿ ಮುನ್ನಡೆ ಪಡೆದಿತ್ತು. ಇತ್ತ ಕರ್ನಾಟಕ ಕನಿಷ್ಠ ಪಕ್ಷ ಎರಡನೇ ಇನಿಂಗ್ಸ್ ನಲ್ಲಾದರೂ ಜಮ್ಮು ತಂಡವನ್ನು ಬೇಗ ಆಲೌಟ್ ಮಾಡಿಸಿ ರನ್ ಚೇಸ್ ಮಾಡುವ ಪ್ರಯತ್ನ ಮಾಡಬಹುದಿತ್ತು. ಆದರೆ ಎರಡನೇ ಇನಿಂಗ್ಸ್ ನಲ್ಲೂ ಜಮ್ಮು ತಂಡಕ್ಕೆ ತಿರುಗೇಟು ನೀಡಲು ಕರ್ನಾಟಕ ವಿಫಲವಾಯಿತು. ಹೀಗಾಗಿ ಜಮ್ಮು ತಂಡ ಮೊದಲ ಬಾರಿಗೆ ರಣಜಿ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿತು.

Share this Story:

Follow Webdunia kannada

ಮುಂದಿನ ಸುದ್ದಿ

ತಂದೆಯನ್ನು ಕಳೆದುಕೊಂಡ ನೋವಿನಲ್ಲೇ ನಿರ್ಣಾಯಕ ಪಂದ್ಯಕ್ಕೆ ತಂಡವನ್ನು ಸೇರಿಕೊಳ್ಳಲಿರುವ ರಿಂಕು ಸಿಂಗ್‌