Select Your Language

Notifications

webdunia
webdunia
webdunia
webdunia

Ranji Trophy Final: ಮಯಾಂಕ್ ಅಗರ್ವಾಲ್ ಇಂದು ಶತಕ ಸಿಡಿಸಿದ್ದಕ್ಕೆ ಕರ್ನಾಟಕ ಬಚಾವ್

Mayank Agarwal
Photo Credit: X
ಹುಬ್ಬಳ್ಳಿ: ರಣಜಿ ಟ್ರೋಫಿ ಕ್ರಿಕೆಟ್ ಫೈನಲ್ ನಲ್ಲಿ ಇಂದು ಮಯಾಂಕ್ ಅಗರ್ವಾಲ್ ಶತಕ ಸಿಡಿಸದೇ ಹೋಗಿದ್ದರೆ ಕರ್ನಾಟಕದ ಕತೆ ಏನಾಗಿತ್ತೋ ಹೇಳಲು ಸಾಧ್ಯವಿಲ್ಲ.

ಜಮ್ಮು ಕಾಶ್ಮೀರ ಮೊದಲ ಇನಿಂಗ್ಸ್ ನಲ್ಲಿ 584 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ಈ ಮೊತ್ತ ಬೆನ್ನತ್ತಿದ್ದ ಕರ್ನಾಟಕಕ್ಕೆ ಇಂದು ಕೆಎಲ್ ರಾಹುಲ್, ದೇವದತ್ತ ಪಡಿಕ್ಕಲ್, ಕರುಣ್ ನಾಯರ್, ರವಿಚಂದ್ರನ್ ಅಲ್ಪ ಮೊತ್ತಕ್ಕೆ ಔಟಾಗಿ ಸಂಕಷ್ಟ ತಂದಿತ್ತರು.

ಒಂದು ಹಂತದಲ್ಲಿ ಕರ್ನಾಟಕ 57 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ತಂಡವನ್ನು ಆಧರಿಸಿದ್ದು ಮಯಾಂಕ್ ಅಗರ್ವಾಲ್ ಮತ್ತು ಶ್ರೇಯಸ್ ಗೋಪಾಲ್. ಬಹುತೇಕ ಸ್ಟ್ರೈಕ್ ತಾವೇ ಇಟ್ಟುಕೊಂಡು ಒತ್ತಡದ ಸಂದರ್ಭದಲ್ಲಿಯೂ ಮಯಾಂಕ್ ಶತಕ ಸಿಡಿಸಿ ಮಿಂಚಿದರು. ಇದೀಗ 117 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಒಂದು ವೇಳೆ ಮಯಾಂಕ್ ಇಂತಹ ಹೋರಾಟದ ಇನಿಂಗ್ಸ್ ಆಡದೇ ಇದ್ದಿದ್ದರೆ ಕರ್ನಾಟಕ ಈಗಾಗಲೇ ಆಲೌಟ್ ಆಗಬೇಕಿತ್ತು.

ಇನ್ನೊಂದೆಡೆ ಅವರಿಗೆ ತಕ್ಕ ಸಾಥ್ ನೀಡಿದ ಶ್ರೇಯಸ್ ಗೋಪಾಲ್ 83 ಎಸೆತಗಳಿಂದ 27 ರನ್ ಗಳಿಸಿ ಈಗಷ್ಟೇ ಔಟಾಗಿದ್ದಾರೆ. ಕರ್ನಾಟಕ ಇತ್ತೀಚೆಗಿನ ವರದಿ ಬಂದಾಗ 5 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿದೆ. ಇನ್ನೂ 400 ರನ್ ಗಳ ಹಿನ್ನಡೆಯಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Ranji Trophy Final: ರಣಜಿ ಫೈನಲ್ ನಲ್ಲಿ ಕೈಕೊಟ್ಟ ಬಿಗ್ ಥ್ರೀ: ಜಮ್ಮು ಎದುರು ಕರ್ನಾಟಕ ಹಳಿ ತಪ್ಪಿದ ರೈಲು