Funny video: ಕಣ್ಣೆದುರೇ ಇದ್ದರೂ ಚೆಂಡು ಎಲ್ಲಿ ಎಂದು ಮೈದಾನದಲ್ಲಿ ಹುಡುಕಾಡಿದ ಇಶಾನ್ ಕಿಶನ್

Krishnaveni K
ಭಾನುವಾರ, 13 ಏಪ್ರಿಲ್ 2025 (10:18 IST)
Photo Credit: X
ಹೈದರಾಬಾದ್: ಕೆಲವೊಮ್ಮೆ ಕಣ್ಣೆದುರೇ ಇರುವ ವಸ್ತು ಕಾಣಿಸದಾಗುತ್ತದೆ. ಸನ್ ರೈಸರ್ಸ್ ಹೈದರಾಬಾದ್ ಆಟಗಾರ ಇಶಾನ್ ಕಿಶನ್ ಗೂ ಹೀಗೇ ಆಗಿದೆ. ಮೈದಾನದಲ್ಲಿ ಚೆಂಡಿಗಾಗಿ ಹುಡುಕಾಡಿದ ಫನ್ನಿ  ವಿಡಿಯೋವೊಂದು ವೈರಲ್ ಆಗಿದೆ.

ಪಂಜಾಬ್ ಕಿಂಗ್ಸ್ ವಿರುದ್ಧ ನಿನ್ನೆ ನಡೆದ ಐಪಿಎಲ್ ಪಂದ್ಯವನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ 8 ವಿಕೆಟ್ ಗಳಿಂದ ಗೆದ್ದುಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 245 ಬೃಹತ್ ಗುರಿ ನೀಡಿತ್ತು. ಹಾಗಿದ್ದರೂ ಹೈದರಾಬಾದ್ 18.3 ಓವರ್ ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 247 ರನ್ ಗಳಿಸುವ ಮೂಲಕ ಗುರಿ ಮುಟ್ಟಿತು.

ಫೀಲ್ಡಿಂಗ್ ವೇಳೆ ಇಶಾನ್ ಕಿಶನ್ ತಮಾಷೆಯ ಕ್ಷಣವೊಂದಕ್ಕೆ ಸಾಕ್ಷಿಯಾದರು. ಪಂಜಾಬ್ ಬ್ಯಾಟಿಗ ಸ್ಟ್ರೈಟ್ ಡ್ರೈವ್ ಹೊಡೆತವೊಂದನ್ನು ಹೊಡೆದರು. ಇದನ್ನು ಡೈವ್ ಹೊಡೆದು ಇಶಾನ್ ಕಿಶನ್ ತಡೆದರು. ಅಲ್ಲಿ ಬಿಳಿ ಮತ್ತು ನೇರಳೆ ಕಲರ್ ನ ಡಿಸೈನ್ ಇತ್ತು.

ಅದರ ಮೇಲೆ ಚೆಂಡು ಬಿದ್ದಿದ್ದರಿಂದ ಇಶಾನ್ ಗೆ ಚೆಂಡು ಕಾಣಿಸಲೇ ಇಲ್ಲ. ಚೆಂಡು ತಡೆದರೂ ಚೆಂಡಿಗಾಗಿ ಹುಡುಕಾಡುತ್ತಿರುವುದು ನೋಡಿ ಸಹ ಆಟಗಾರ ಬಂದು ಸಹಾಯ ಮಾಡಿದರು. ಈ ವೇಳೆ ಅಲ್ಲಿದ್ದವರ ಮುಖದಲ್ಲಿ ನಗುವೋ ನಗು. ಈ ಫನ್ನಿ ವಿಡಿಯೋ ಈಗ ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA: ಎರಡನೇ ಟೆಸ್ಟ್ ಸೋಲುವ ಭೀತಿಯಲ್ಲಿ ಟೀಂ ಇಂಡಿಯಾ

IND vs SA: 82 ಬಾಲ್, 14 ರನ್.. ಅಬ್ಬಬ್ಬಾ ಕುಲದೀಪ್ ಯಾದವ್ ಗೆ ಏನು ತಾಳ್ಮೆ ಗುರೂ

IND vs SA: ಟೀಂ ಇಂಡಿಯಾಕ್ಕೆ ಟೆಸ್ಟ್ ನಲ್ಲಿ ತವರಿನಲ್ಲೇ ಇಂಥಾ ಸ್ಥಿತಿ ಯಾವತ್ತೂ ಇರಲಿಲ್ಲ

ಮಹಿಳಾ ಏಕದಿನ ವಿಶ್ವಕಪ್‌ ಗೆದ್ದ ಬೆನ್ನಲ್ಲೇ ಚೊಚ್ಚಲ ಅಂಧರ ಟಿ20 ವಿಶ್ವಕಪ್ ಕಿರೀಟ ಜಯಿಸಿದ ಭಾರತ

IND vs SA: ಏಕದಿನ ಸರಣಿಗೆ ಭಾರತ ತಂಡ ಪ್ರಕಟ, ಕನ್ನಡಿಗ ರಾಹುಲ್‌ಗೆ ಒಲಿದ ನಾಯಕತ್ವ

ಮುಂದಿನ ಸುದ್ದಿ
Show comments