Publish Date: Sat, 16 Jun 2018 (08:47 IST)
Updated Date: Sat, 16 Jun 2018 (08:48 IST)
ಮುಂಬೈ: ಇದೀಗ ಎಲ್ಲೆಲ್ಲಿ ನೋಡಿದರೂ ಫುಟ್ಬಾಲ್ ಜ್ವರ. ರಷ್ಯಾದಲ್ಲಿ ನಡೆಯುತ್ತಿರುವ 2018 ರ ಫಿಫಾ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿ ಹವಾ ಕ್ರಿಕೆಟಿಗರನ್ನೂ ಬಿಟ್ಟಿಲ್ಲ.
ಇದೀಗ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೂಡಾ ತಮ್ಮ ನೆಚ್ಚಿನ ತಂಡ ಮತ್ತು ಆಟಗಾರನ ಹೆಸರು ಹೇಳಿದ್ದು, ಅವರಿಂದಾಗಿ ನನಗೆ ನಿದ್ರೆಯೇ ಇಲ್ಲದಂತಾಗಿದೆ ಎಂದಿದ್ದಾರೆ.
ಅರ್ಜೆಂಟೀನಾ ತಂಡವನ್ನು ಬೆಂಬಲಿಸುತ್ತಿರುವ ಭಜಿ, ಮುಂದಿನ ಒಂದು ತಿಂಗಳು ನನಗೆ ನಿದ್ರೆಯೇ ಇರಲ್ಲ. ಮೆಸ್ಸಿ ಚೆನ್ನಾಗಿ ಆಡು ಎಂದು ಟ್ವೀಟ್ ಮಾಡಿ ತಮ್ಮ ಫುಟ್ಬಾಲ್ ಪ್ರೇಮ ಪ್ರಕಟಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.