Webdunia - Bharat's app for daily news and videos

Install App

ಕೇವಲ 13.2 ಓವರ್​ಗೆ ಮುಕ್ತಾಯಗೊಂಡ ಮೊದಲ ದಿನದಾಟ: ಭಾರತದ ಆತಂಕ ಹೆಚ್ಚಿಸಿದ ಮಳೆ

Sampriya
ಶನಿವಾರ, 14 ಡಿಸೆಂಬರ್ 2024 (14:33 IST)
Photo Courtesy X
ಬ್ರಿಸ್ಬೇನ್​: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಪ್ರತಿಷ್ಠಿತ ಬಾರ್ಡರ್​ ಗವಾಸ್ಕರ್​ ಟ್ರೋಫಿ ಟೆಸ್ಟ್​ ಸರಣಿಯ ಮೂರನೇ ಪಂದ್ಯ ಬ್ರಿಸ್ಬೇನ್‌ನಲ್ಲಿ ಇಂದು ಆರಂಭವಾಗಿದೆ.  ಟಾಸ್​ ಗೆದ್ದು ಭಾರತ ಬ್ಯಾಟಿಂಗ್​ ಆಯ್ದುಕೊಂಡಿದೆ. ಆದರೇ ಮೊದಲ ದಿನವೇ ಮಹತ್ವದ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ.

ಪರ್ತ್​ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ 295 ರನ್​ಗಳಿಂದ ಗೆಲುವು ಸಾಧಿಸಿದ್ದ ಭಾರತ ಎರಡನೇ ಟೆಸ್ಟ್​ನಲ್ಲಿ ಮುಗ್ಗರಿಸಿತ್ತು. ಅಡಿಲೇಡ್​ನ ಓವೇಲ್​ ಮೈದಾನದಲ್ಲಿ ನಡೆದಿದ್ದ ಪಿಂಕ್​ ಬಾಲ್ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಹೀನಾಯವಾಗಿ ಸೋಲನುಭವಿಸಿತು.

ಇದೀಗ ಭಾರತ ಮೂರನೇ ಟೆಸ್ಟ್​ ಗೆದ್ದು ಆಸ್ಟ್ರೇಲಿಯಾ ವಿರುದ್ಧ ​ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ.  ಪಂದ್ಯ ಆರಂಭವಾಗಿ 13.2 ಓವರ್​ಗಳು ಮುಕ್ತಾಯಗೊಳ್ಳುತ್ತಿದ್ದಂತೆ ಮಳೆ ಅಡ್ಡಿಯಾಗಿ ಪಂದ್ಯ ಅರ್ಧಕ್ಕೆ ನಿಂತಿತು.

4 ಗಂಟೆ ಕಾಲ ಕಳೆದರೂ ಮಳೆ ನಿಲ್ಲದ ಸೂಚನೆ ಸಿಗದ ಕಾರಣ ಮೊದಲ ದಿನದಾಟವನ್ನು ಮುಕ್ತಾಯಗೊಳಿಸಲಾಯಿತು. ಏತನ್ಮಧ್ಯೆ 4 ದಿನಗಳ ಕಾಲ ಬ್ರಿಸ್ಬೆನ್​ನಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಇದರಿಂದ ಭಾರತಕ್ಕೆ ಆತಂಕ ಹೆಚ್ಚಾಗಿದೆ. ಒಂದು ವೇಳೆ ಈ ಪಂದ್ಯ ಫಲಿತಾಂಶ ಕಾಣದೆ ಅಂತ್ಯಗೊಂಡರೇ  ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಭಾರತಕ್ಕೆ ಭಾರೀ ಹೊಡೆತ ಬೀಳಲಿದೆ.

ಸದ್ಯ ವಿಶ್ವ ಟೆಸ್ಟ್​ ಚಾಂಪಿಯನ್ಸ್​ ಅಂಕಪಟ್ಟಿಯಲ್ಲಿ, ಮೊದಲ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ತಂಡ ಇದೆ. ಹರಿಣ ಪಡೆ 63.33 ಶೇಕಡವಾರು ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೇ, ಆಸ್ಟ್ರೇಲಿಯಾ 60.71 ಮತ್ತು ಭಾರತ 57.29 ಶೇಕಡವಾರು ಅಂಕದೊಂದಿಗೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ರಿಷಭ್ ಪಂತ್ ನಾಲ್ಕನೇ ಟೆಸ್ಟ್ ಆಡುವ ಬಗ್ಗೆ ಇಲ್ಲಿದೆ ಲೇಟೆಸ್ಟ್ ಅಪ್ ಡೇಟ್

ತೂಕ ಇಳಿಸಿಕೊಂಡ ಕ್ರಿಕೆಟಿಗ ಸರ್ಫರಾಜ್ ಖಾನ್: ಇವರೇನಾ ಅವರು

Kantara Chpater 1: ಕೊನೆಗೂ ಕಾಂತಾರ ಚಾಪ್ಟರ್ 1 ಶೂಟಿಂಗ್ ಮುಗಿಯಿತು: video

ಮ್ಯಾಂಚೆಸ್ಟರ್ ನಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾದ ಕೆಎಲ್ ರಾಹುಲ್

IND vs ENG: ಆಕಾಶ್ ದೀಪ್, ಅರ್ಷ್ ದೀಪ್ ಬಳಿಕ ಟೀಂ ಇಂಡಿಯಾದ ಮತ್ತೊಬ್ಬ ಆಟಗಾರನಿಗೆ ಗಾಯ

ಮುಂದಿನ ಸುದ್ದಿ
Show comments