Webdunia - Bharat's app for daily news and videos

Install App

ರೋಹಿತ್ ಶರ್ಮಾರನ್ನು ಅಭಿಮಾನಿಗಳೂ ಕ್ಯಾರೇ ಎನ್ನುತ್ತಿಲ್ಲ: ವಿಡಿಯೋ ವೈರಲ್

Krishnaveni K
ಗುರುವಾರ, 2 ಜನವರಿ 2025 (12:44 IST)
ಸಿಡ್ನಿ: ಟೀಂ ಇಂಡಿಯಾಕ್ಕೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ರೋಹಿತ್ ಶರ್ಮಾ ಈಗ ಕಳೆದ ಕೆಲವು ಪಂದ್ಯಗಳಿಂದ ಕಳಪೆ ಪ್ರದರ್ಶನ ನೀಡುತ್ತಿರುವುದರಿಂದ ಯಾರೂ ಅವರನ್ನು ಕ್ಯಾರೇ ಮಾಡದ ಸ್ಥಿತಿಗೆ ತಲುಪಿದ್ದಾರೆಯೇ? ಹೀಗೊಂದು ವಿಡಿಯೋ ಈಗ ವೈರಲ್ ಆಗಿದೆ.
 

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಈಗಾಗಲೇ ಟೆಸ್ಟ್ ಸರಣಿಯಲ್ಲಿ 1-2  ಅಂತರದಿಂದ ಹಿನ್ನಡೆಯಲ್ಲಿದೆ. ನಾಯಕ ರೋಹಿತ್ ಶರ್ಮಾ ಸೇರಿದಂತೆ ತಂಡದ ಬ್ಯಾಟಿಂಗ್ ತಳಮಟ್ಟದಲ್ಲಿದೆ. ಹೀಗಾಗಿ ಅಭಿಮಾನಿಗಳು ತೀವ್ರ ಆಕ್ರೋಶಗೊಂಡಿದ್ದಾರೆ.

ಟಿ20 ವಿಶ್ವಕಪ್ ಗೆದ್ದು ಕೊಟ್ಟಾಗ ರೋಹಿತ್ ಶರ್ಮಾರನ್ನು ತಲೆಮೇಲೆ ಎತ್ತಿ ಕೂರಿಸಿದ್ದ ಅಭಿಮಾನಿಗಳು ಈಗ ಅಷ್ಟೇ ಬೇಸರ ಹೊರಹಾಕುತ್ತಿದ್ದಾರೆ. ಎಷ್ಟೆಂದರೆ ಆಸ್ಟ್ರೇಲಿಯಾದಲ್ಲಿರುವ ಟೀಂ ಇಂಡಿಯಾ ನಾಯಕನನ್ನು ಅಭಿಮಾನಿಗಳು ಕ್ಯಾರೇ ಎನ್ನುತ್ತಿಲ್ಲವೇನೋ ಎಂದು ಅನುಮಾನ ಮೂಡಿಸುವಂತಹ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆಸೀಸ್ ಪ್ರಧಾನಿಯನ್ನು ಭೇಟಿ ಮಾಡಲು ಹೋಗಿದ್ದಾಗ ಈ ವಿಡಿಯೋ ಮಾಡಲಾಗಿತ್ತು ಎನಿಸುತ್ತಿದೆ. ಆದರೆ ಈಗ ಇದನ್ನು ವೈರಲ್ ಮಾಡಿರುವ ಅಭಿಮಾನಿಗಳು ರೋಹಿತ್ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದಾರೆ. ತಂಡದ ಬಸ್ ಏರಲು ಎಲ್ಲಾ ಆಟಗಾರರು ಬರುವಾಗ ಮೊದಲು ವಿರಾಟ್ ಕೊಹ್ಲಿ ಬರುತ್ತಾರೆ. ಅವರ ಮೇಲೆಯೇ ಎಲ್ಲಾ ಕ್ಯಾಮರಾಗಳು, ಅಭಿಮಾನಿಗಳು ಗಮನ ಕೇಂದ್ರೀಕರಿಸುತ್ತಾರೆ. ಅಭಿಮಾನಿಗಳು ಆಟೋಗ್ರಾಫ್ ಗಾಗಿ ಕೊಹ್ಲಿಯ ಹಿಂದೆ ಬೀಳುತ್ತಾರೆ. ಆದರೆ ಅವರ ಹಿಂದೆಯೇ ಇತರೆ ಆಟಗಾರರೊಂದಿಗೆ ಬರುವ ರೋಹಿತ್ ರನ್ನು ಯಾರೂ ಕ್ಯಾರೇ ಮಾಡುತ್ತಿಲ್ಲ. ಕೊಹ್ಲಿ ಪಕ್ಕದಲ್ಲೇ ಜಾಗ ಮಾಡಿಕೊಂಡು ರೋಹಿತ್ ಬಸ್ ಏರುತ್ತಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

DC vs SRH match: ಬೇಕಿದ್ದಾಗ ಯಾವತ್ತೂ ಆಡಲ್ಲ, ಟ್ರೋಲ್ ಆದ ಕೆಎಲ್ ರಾಹುಲ್

Rishabh Pant: ರಿಷಭ್ ಪಂತ್ ಬ್ಯಾಟಿಂಗ್ ವೇಳೆ ಪಕ್ಕದಲ್ಲಿ ನಿಲ್ಲುವುದೂ ಡೇಂಜರ್: ವಿಡಿಯೋ ನೋಡಿ

Digvesh Rathi: ಎರಡು ಭಾರಿ ದಂಡ ವಿಧಿಸಿದರು ನಿಲ್ಲಿಸದ ನೋಟ್‌ಬುಕ್‌ ಸೆಲೆಬ್ರೇಶನ್‌

IPL 2025: ಚೆನ್ನೈ ತಂಡದ ಮಹಾ ಎಡವಟ್ಟು: ನಿಯಮ ಮರೆತು ಪಂದ್ಯ ಸೋತ ಧೋನಿ ಪಡೆ

IPL 2025: ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 16 ವರ್ಷಗಳ ಬಳಿಕ ಈ ದಾಖಲೆ ಬರೆದ ಆರ್‌ಸಿಬಿ

ಮುಂದಿನ ಸುದ್ದಿ
Show comments