ಅಕಾಯ್ ಕೊಹ್ಲಿಗಾಗಿ ರೋಹಿತ್ ಶರ್ಮಾಗೆ ಡಿಮ್ಯಾಂಡ್ ಮಾಡಿದ ಫ್ಯಾನ್ಸ್

Krishnaveni K
ಶುಕ್ರವಾರ, 1 ಮಾರ್ಚ್ 2024 (09:15 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ನವಜಾತ ಮಗ ಅಕಾಯ್ ಕೊಹ್ಲಿಗಾಗಿ ಅಭಿಮಾನಿಗಳು ನಾಯಕ ರೋಹಿತ್ ಶರ್ಮಾಗೆ ಹೊಸ ಬೇಡಿಕೆಯಿಟ್ಟಿದ್ದಾರೆ.

ಇದೇ ಫೆಬ್ರವರಿ 15 ರಂದು ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿಗೆ ಪುತ್ರನ ಜನನವಾಗಿತ್ತು. ಲಂಡನ್ ನಲ್ಲಿ ಅನುಷ್ಕಾ ಹೆರಿಗೆಯಾಗಿತ್ತು. ಮಗ ಹುಟ್ಟಿದ ನಾಲ್ಕು ದಿನಗಳ ನಂತರ ಕೊಹ್ಲಿ ದಂಪತಿ ಸೋಷಿಯಲ್ ಮೀಡಿಯಾ ಮೂಲಕ ಖುಷಿ ಸುದ್ದಿ ಹಂಚಿಕೊಂಡಿದ್ದರು.

ಅಕಾಯ್ ಜನಿಸಿದ ಕ್ಷಣದಿಂದಲೇ ಅಭಿಮಾನಿಗಳು ಅವರ ಹೆಸರಿನಲ್ಲಿ ಸೋಷಿಯಲ್ ಮೀಡಿಯಾ ಖಾತೆ ತೆರೆದಿದ್ದರು. ಅಲ್ಲದೆ, ಕೆಲವರು ಎಐ ಜನರೇಟೆಡ್ ಫೋಟೋ ಪ್ರಕಟಿಸಿದ್ದರು. ಅಂತೂ ಹುಟ್ಟಿದ ಮರುಕ್ಷಣದಿಂದಲೇ ಅಕಾಯ್  ಫ್ಯಾನ್ ಫಾಲೋಯಿಂಗ್ ಕೂಡಾ ಸಾಕಷ್ಟಾಗಿದೆ.

ಅಷ್ಟೇ ಏಕೆ, ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಡಬ್ಲ್ಯುಪಿಎಲ್ ಪಂದ್ಯದ ವೇಳೆಯೂ ಆರ್ ಸಿಬಿ ಅಭಿಮಾನಿಗಳು ಅಕಾಯ್ ಗೆ ವೆಲ್ ಕಂ ಬೋರ್ಡ್ ಹಿಡಿದು ನಿಂತಿದ್ದರು. ಇದೀಗ ಮತ್ತೊಂದು ಹೆಜ್ಜೆಯಿಟ್ಟಿರುವ ಕ್ರಿಕೆಟ್ ಅಭಿಮಾನಿಗಳು ಅಕಾಯ್ ನನ್ನೂ ಡೆಬ್ಯೂಟ್ ಮಾಡಿಸಿ ಎಂದು ರೋಹಿತ್ ಶರ್ಮಾಗೆ ಮನವಿ ಮಾಡಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಅಭಿಮಾನಿಯೊಬ್ಬರು ಅಕಾಯ್ ನ್ನು ಡೆಬ್ಯೂಟ್ ಮಾಡಿಸಿ ಎಂದು ರೋಹಿತ್ ಗೆ ಮನವಿ ಮಾಡುವಂತೆ ಪೋಸ್ಟರ್ ಹಿಡಿದು ನಿಂತಿದ್ದರು. ಈ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರೋಹಿತ್ ಶರ್ಮಾ ಈ ಸರಣಿಯಲ್ಲಿ ಸರ್ಫರಾಜ್ ಖಾನ್, ರಜತ್ ಪಟಿದಾರ್, ಧ‍್ರುವ್ ಜುರೆಲ್ ಗೆ ಚೊಚ್ಚಲ ಅವಕಾಶ ನೀಡಿದ್ದರು. ಹೀಗಾಗಿ ಅಕಾಯ್ ಗಾಗಿಯೂ ಫ್ಯಾನ್ಸ್ ಬೇಡಿಕೆಯಿಟ್ಟಿದ್ದಾರೆ. ಹುಟ್ಟಿ ಇನ್ನೂ ತಿಂಗಳು ಕಳೆದಿಲ್ಲ. ಆಗಲೇ ಅಕಾಯ್ ಗೆ ಇಷ್ಟೊಂದು ಅಭಿಮಾನಿಗಳು!

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ರಿಷಬ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌, ಗಾಯದಿಂದ ಚೇತರಿಸಿಕೊಂಡ ಪಂತ್‌ಗೆ ಬಿಸಿಸಿಐ ಹೊಸ ಜವಾಬ್ದಾರಿ

ವೇತನ ಮಾತ್ರ ಪುರುಷರಷ್ಟೇ ಬೇಕು, ಪರ್ಫಾರ್ಮೆನ್ಸ್ ಝೀರೋ: ಟ್ರೋಲ್ ಆದ ಮಹಿಳಾ ಕ್ರಿಕೆಟಿಗರು

Women World Cup: ಇಂಗ್ಲೆಂಡ್‌ ವಿರುದ್ಧ ಸೋತ ಭಾರತಕ್ಕೆ ಸೆಮಿಫೈನಲ್‌ ಹಾದಿ ಕಠಿಣ

Ind Vs Aus ODI: ಹಿಟ್‌ಮ್ಯಾನ್‌, ಕಿಂಗ್‌ಕೊಹ್ಲಿ ತಂಡಕ್ಕೆ ವಾಪಾಸ್ಸಾದರು ನಡೆಯದ ಮ್ಯಾಜಿಕ್‌

ಸ್ಟಾರ್‌ ಬ್ಯಾಟರ್‌ ಸ್ಮೃತಿ ಮಂದಾನ ಶೀಘ್ರದಲ್ಲೇ ಹಣೆಮಣೆಗೆ: ಇಂದೋರ್‌ನ ಸೊಸೆ ಎಂದಿದ್ಯಾರು ಗೊತ್ತಾ

ಮುಂದಿನ ಸುದ್ದಿ
Show comments