Select Your Language

Notifications

webdunia
webdunia
webdunia
webdunia

ಮರ್ಸಿಡಸ್ ಕಾರಿಗೆ ಆಸೆಪಟ್ಟಿದ್ದ ರೋಹಿತ್ ಶರ್ಮಾ

Rohit Sharma

Krishnaveni K

ಮುಂಬೈ , ಬುಧವಾರ, 28 ಫೆಬ್ರವರಿ 2024 (08:56 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಬಗ್ಗೆ ಯಾರಿಗೂ ತಿಳಿಯದ ಹಳೆಯ ಕತೆಯೊಂದನ್ನು ಅವರ ಬಾಲ್ಯದ ಕೋಚ್ ದಿನೇಶ್ ಲಾಡ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ರೋಹಿತ್ ಶರ್ಮಾರನ್ನು ಚಿಕ್ಕಂದಿನಿಂದಲೂ ನೋಡಿರುವ ದಿನೇಶ್ ಲಾಡ್ ಹಿಂದೊಮ್ಮೆ ಅವರು ದುಬಾರಿ ಬೆಲೆಯ ಮರ್ಸಿಡಸ್ ಕಾರಿಗೆ ಆಸೆಪಟ್ಟಿದ್ದ ವಿಚಾರವನ್ನು ಹೇಳಿಕೊಂಡಿದ್ದಾರೆ. ಆಗಿನ್ನೂ ರೋಹಿತ್ ಅಂಡರ್-19 ತಂಡದಲ್ಲಿದ್ದರು. ಇನ್ನೂ ಸ್ಟಾರ್ ಆಗಿರಲಿಲ್ಲ. ಆದರೆ ಆಗಲೇ ಅವರ ಕಣ್ಣುಗಳಲ್ಲಿ ಕನಸುಗಳಿತ್ತು ಎಂದು ದಿನೇಶ್ ಲಾಡ್ ಹೇಳಿಕೊಂಡಿದ್ದಾರೆ.

‘ಒಂದು ದಿನ ನಾನು ಮತ್ತು ರೋಹಿತ್ ಶರ್ಮಾ ಮರ್ಸಿಡಸ್ ಕಾರೊಂದನ್ನು ನೋಡಿದೆವು. ಅದನ್ನು ನೋಡಿ ರೋಹಿತ್ ‘ಸರ್ ಮುಂದೊಂದು ದಿನ ಈ ಕಾರನ್ನು ನಾನು ಖರೀದಿಸುತ್ತೇನೆ’ ಎಂದರು. ನಾನು ಶಾಕ್ ಆಗಿ ‘’ಏನು ನಿನಗೆ ಹುಚ್ಚಾ? ಆ ಕಾರು ಎಷ್ಟು ದುಬಾರಿ ಗೊತ್ತಾ’’ ಎಂದಿದ್ದೆ. ಆಗಲೂ ರೋಹಿತ್ ವಿಚಲಿತರಾಗಲಿಲ್ಲ. ‘’ಸರ್ ಖಂಡಿತಾ ನಾನು ಇದನ್ನು ಖರೀದಿಸುತ್ತೇನೆ’’ ಎಂದಿದ್ದರು. ಅವರ ಕಣ್ಣಲ್ಲಿ ಎಷ್ಟು ಹೊಳಪಿತ್ತೆಂದರೆ ಮುಂದೊಂದು ದಿನ ತಾನು ಆ ಎತ್ತರಕ್ಕೆ ಬೆಳೆಯುವೆ ಎಂಬ ವಿಶ್ವಾಸವಿತ್ತು’ ಎಂದು ದಿನೇಶ್ ಲಾಡ್ ಹೇಳಿದ್ದಾರೆ.

ರೋಹಿತ್ ಹೇಳಿದಂತೇ ನಡೆದುಕೊಂಡಿದ್ದಾರೆ. ಇಂದು ರೋಹಿತ್ ಬಳಿ ಅದಕ್ಕಿಂತಲೂ ದುಬಾರಿ ಕಾರಿದೆ. ವಿಶ್ವದ ಅಗ್ರಮಾನ್ಯ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ದುಡ್ಡಿಗಾಗಿ ಪರದಾಡಿದ್ದ ವ್ಯಕ್ತಿ ಇಂದು ಕೋಟಿಗಳ ಒಡೆಯ. ರೋಹಿತ್ ಗೆ 20 ವರ್ಷವಾಗಿದ್ದಾಗಲೇ ಡೆಕ್ಕನ್ ಚಾರ್ಜರ್ಸ್ ಐಪಿಎಲ್ ತಂಡ ಅವರನ್ನು 4.8 ಕೋಟಿ ರೂ.ಗೆ ಖರೀದಿ ಮಾಡಿತ್ತು. ಬಳಿಕ ಅವರು ಡೆಕ್ಕನ್ ಪರ ಎರಡನೇ ಗರಿಷ್ಠ ಸ್ಕೋರರ್ ಎನಿಸಿದರು. ಬಳಿಕ ಮುಂಬೈ ಪಾಲಾಗಿ ದಾಖಲೆಯ ಬಾರಿ ಚಾಂಪಿಯನ್ ಆಗಿದ್ದು ಇಂದು ಇತಿಹಾಸ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಟ್ಟ ಮೇಲೆ ಬುದ್ಧಿ ಕಲಿತುಕೊಂಡ ಶ್ರೇಯಸ್ ಅಯ್ಯರ್, ಇಶಾನ್ ಕಿಶನ್