ಮೈದಾನದಲ್ಲಿ ತಪ್ಪು ಮಾಡಿದ ಕೆಎಲ್ ರಾಹುಲ್ ಮೇಲೆ ಅಭಿಮಾನಿಗಳ ಸಿಟ್ಟು

Webdunia
ಗುರುವಾರ, 27 ಸೆಪ್ಟಂಬರ್ 2018 (08:57 IST)
ದುಬೈ: ಅಫ್ಘಾನಿಸ್ತಾನ ವಿರುದ್ಧ ಮೊದಲ ಬಾರಿಗೆ ಏಷ್ಯಾ ಕಪ್ ನ ಈ ಅವೃತ್ತಿಯಲ್ಲಿ ಆಡುವ ಅವಕಾಶ ಪಡೆದಿದ್ದ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಮೇಲೆ ಅಭಿಮಾನಿಗಳು ಚೆನ್ನಾಗಿ ಆಡಿದರೂ ಸಿಟ್ಟಾಗಿದ್ದಾರೆ.

ರಾಹುಲ್ ಈ ಪಂದ್ಯದಲ್ಲಿ ಅರ್ಧಶತಕ ಗಳಿಸಿ ತಮಗೆ ಸಿಕ್ಕಿದ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡರು. ಆದರೆ ರಶೀದ್ ಖಾನ್ ಬೌಲಿಂಗ್ ನಲ್ಲಿ ಸ್ವೀಪ್ ಮಾಡಲು ಹೋಗಿ ಎಲ್ ಬಿಡಬ್ಲ್ಯು ಬಲೆಗೆ ಬಿದ್ದರು.

ಆದರೆ ಅಂಪಾಯರ್ ತೀರ್ಪನ್ನು ಒಪ್ಪದೇ ಉಳಿದಿದ್ದ ಒಂದೇ ಒಂದು ರಿವ್ಯೂ ಪಡೆದು ತಪ್ಪು ಮಾಡಿದರು. ನಂತರ ಧೋನಿ 8 ರನ್ ಗಳಿಸಿದ್ದಾಗ ಅಂಪಾಯರ್  ಎಲ್  ಬಿ ತೀರ್ಪು ನೀಡಿ ಪೆವಿಲಿಯನ್ ಹಾದಿ ತೋರಿಸಿದರು. ಆದರೆ ರಿಪ್ಲೇನಲ್ಲಿ ಧೋನಿ ನಾಟೌಟ್ ಆಗಿದ್ದು ಸ್ಪಷ್ಟವಾಗಿತ್ತು. ಆದರೆ ರಿವ್ಯೂ ಪಡೆಯಲು ಆಗ ಭಾರತದ ಬಳಿ ರಿವ್ಯೂ ಇರಲಿಲ್ಲ. ಹೀಗಾಗಿ ಧೋನಿ ಪೆವಿಲಿಯನ್ ಗೆ ಮರಳಬೇಕಾಯಿತು. ಒಂದು ವೇಳೆ ಧೋನಿ ಕೊನೆಯವರೆಗೂ ಇದ್ದಿದ್ದರೆ ಫಲಿತಾಂಶ ಬೇರೆಯೇ ಆಗಿರುತ್ತಿತ್ತು. ಹೀಗಾಗಿಯೇ ನೆಟ್ಟಿಗರು ರಾಹುಲ್ ಮೇಲೆ ರಿವ್ಯೂ ವೇಸ್ಟ್ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಂದ್ಯದ ನಂತರ ಇದರ ಬಗ್ಗೆ ಮಾತನಾಡಿದ ರಾಹುಲ್ ‘ಒಂದು ರಿವ್ಯೂ ಇದ್ದಾಗ ನಾನು ಯೋಚಿಸಿ ಬಳಸಬೇಕಾಗಿತ್ತು. ಆದರೆ ಆ ಸಂದರ್ಭದಲ್ಲಿ ಅಂತಹ ಪ್ರಮಾದಗಳು ಆಗುತ್ತವೆ. ಬಾಲ್ ಹೊರ ಹೋಗಿರಬಹುದು ಎಂಬ ಭಾವನೆಯಲ್ಲಿ ರಿವ್ಯೂ ಪಡೆದೆ’ ಎಂದು ತಪ್ಪೊಪ್ಪಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Betting Case: ಸುರೇಶ್ ರೈನಾ, ಶಿಖರ್ ಧವನ್ ಮುಟ್ಟುಗೋಲಾದ ಆಸ್ತಿಯೆಷ್ಟು ಗೊತ್ತಾ

ಭಾರತದ ಬೌಲರ್‌ಗಳ ದಾಳಿಗೆ ತತ್ತರಿಸಿದ ಕಾಂಗರೂ ಪಡೆ: ಟೀಂ ಇಂಡಿಯಾಗೆ ಸರಣಿ ಮುನ್ನಡೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾಗಿ ಗಿಫ್ಟ್ ಕೊಟ್ಟ ಮಹಿಳಾ ಕ್ರಿಕೆಟಿಗರು video

ಐಪಿಎಲ್ 2026: ಧೋನಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌

ಪ್ರಧಾನಿ ನರೇಂದ್ರ ಮೋದಿ ಮುಂದಿಟ್ಟ ಹರ್ಲೀನ್ ಡಿಯೋಲ್ ಪ್ರಶ್ನೆಗೆ ಎಲ್ಲರಿಗೂ ನಗು

ಮುಂದಿನ ಸುದ್ದಿ
Show comments