Webdunia - Bharat's app for daily news and videos

Install App

ಯಶಸ್ವಿ ಜೈಸ್ವಾಲ್ ಸಾಧನೆಗೆ ನಾನೇ ಕಾರಣ ಎಂದು ಕೊಚ್ಚಿಕೊಂಡ ಇಂಗ್ಲೆಂಡ್ ಬ್ಯಾಟಿಗ ಬೆನ್ ಡಕೆಟ್

Krishnaveni K
ಮಂಗಳವಾರ, 20 ಫೆಬ್ರವರಿ 2024 (16:08 IST)
Photo Courtesy: Twitter
ರಾಂಚಿ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡು ಮತ್ತು ಮೂರನೇ ಟೆಸ್ಟ್ ಪಂದ್ಯದಲ್ಲಿ ಸ್ಪೋಟಕ ದ್ವಿಶತಕ ಸಿಡಿಸಿ ದಾಖಲೆ ಮಾಡಿದ್ದ ಟೀಂ ಇಂಡಿಯಾ ಯಂಗ್ ಸೆನ್ಸೇಷನ್ ಬ್ಯಾಟಿಗ ಯಶಸ್ವಿ ಜೈಸ್ವಾಲ್ ಸಾಧನೆಗೆ ನಾನೇ ಸ್ಪೂರ್ತಿ ಎಂದು ಇಂಗ್ಲೆಂಡ್ ಬ್ಯಾಟಿಗ ಬೆನ್ ಡಕೆಟ್ ಕೊಚ್ಚಿಕೊಂಡಿದ್ದಾರೆ.

ಬೆನ್ ಡಕೆಟ್ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಬಿರುಸಿನ ಶತಕ ದಾಖಲಿಸಿದ್ದರು. ಥೇಟ್ ಟಿ20 ಶೈಲಿಯಲ್ಲಿ ಬ್ಯಾಟ್ ಬೀಡಿಸಿದ ಡಕೆಟ್ 153 ರನ್ ಗಳಿಸಿದ್ದರು. ಅವರ ಬೀಡು ಬೀಸಾದ ಇನಿಂಗ್ಸ್ ನಿಂದ ಇಂಗ್ಲೆಂಡ್ ಈ ಪಂದ್ಯದಲ್ಲಿ ಸಂಪೂರ್ಣ ನಿಯಂತ್ರಣ ಸಾಧಿಸುತ್ತದೆ ಎಂದೇ ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಅವರ ವಿಕೆಟ್ ಬಿದ್ದೊಡನೆ ಇಂಗ್ಲೆಂಡ್ ತಲಗೆರೆಯಂತೇ ಧರೆಗುರಳಿತ್ತು.

ಮೂರನೇ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ ಯಶಸ್ವಿ ಜೈಸ್ವಾಲ್ ಕೂಡಾ ಬಿರುಸಾಗಿ ಆಡಿ ದ್ವಿತಶಕ ಗಳಿಸಿದ್ದರು. ಅವರ ದ್ವಿಶತಕದ ಬಗ್ಗೆ ಮಾತನಾಡುವಾಗ ಬೆನ್ ಡಕೆಟ್ ‘ಎದುರಾಳಿ ತಂಡದ ಆಟಗಾರರೊಬ್ಬರು ಬಿರುಸಾಗಿ ಆಡುವಾಗ ನಾವೂ ಆ ರೀತಿ ಆಡೋಣ ಎನಿಸುವುದು ಸಹಜ’ ಎಂದು ಜೈಸ್ವಾಲ್ ಗೆ ತಾನೇ ಸ್ಪೂರ್ತಿಯಾಗಿದ್ದೆ ಎಂದಿದ್ದರು.

ಆದರೆ ಅವರ ಈ ಹೇಳಿಕೆಗೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗರಾದ ಮೈಕಲ್ ವಾನ್, ನಾಸಿರು ಹುಸೇನ್ ತಿರುಗೇಟು ನೀಡಿದ್ದಾರೆ. ಜೈಸ್ವಾಲ್ ಕಠಿಣ ಪರಿಶ್ರಮ ಮತ್ತು ಐಪಿಎಲ್ ನಲ್ಲಿ ಆಡಿದ ಅನುಭವವದಿಂದಾಗಿ ಆ ಇನಿಂಗ್ಸ್ ಆಡಿದರು. ಹೊರತಾಗಿ ನಿಮ್ಮಿಂದ ಸ್ಪೂರ್ತಿ ಪಡೆದಿಲ್ಲ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಅಪರೂಪದ ದಾಖಲೆ ಮಾಡಿದ ಶುಭಮನ್ ಗಿಲ್

ಆಂಗ್ಲರ ನಾಡಲ್ಲಿ ಮತ್ತೇ ಅಬ್ಬರಿಸಿದ ಶುಭ್ಮನ್‌ ಗಿಲ್ ಬ್ಯಾಟಿಂಗ್‌: 8ನೇ ಶತಕ ಸಿಡಿಸಿದ ಕ್ಯಾಪ್ಟನ್‌

IND vs ENG Test: ವಿದೇಶಿ ನೆಲದಲ್ಲಿ ಹೊಸ ದಾಖಲೆ ಬರೆದ ರಿಷಭ್ ಪಂತ್

IND vs ENG: ಕರುಣ್ ನಾಯರ್ ನಿಮಗೆ ಎರಡನೇ ಚಾನ್ಸ್ ಸಿಕ್ತು, ನೀವು ಮಾಡಿದ್ದೇನು

IND vs ENG: ವೈಸ್ ಕ್ಯಾಪ್ಟನ್ಸಿ ಪಟ್ಟ ರಿಷಭ್ ಪಂತ್ ಗೆ ಕೆಲಸ ಮಾಡಲು ಕೆಎಲ್ ರಾಹುಲ್

ಮುಂದಿನ ಸುದ್ದಿ
Show comments