Webdunia - Bharat's app for daily news and videos

Install App

ಟಾಸ್ ಗೆದ್ದೋನೇ ಬಾಸು! ಇಂಗ್ಲೆಂಡ್ ಮುಂದೆ ಟೀಂ ಇಂಡಿಯಾ ಉಡೀಸ್

Webdunia
ಶನಿವಾರ, 27 ಮಾರ್ಚ್ 2021 (08:56 IST)
ಪುಣೆ: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯವನ್ನು ಇಂಗ್ಲೆಂಡ್ 6 ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ.


ಮತ್ತೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಕೆಎಲ್ ರಾಹುಲ್ ಶತಕ (108), ವಿರಾಟ್ ಕೊಹ್ಲಿ (66), ರಿಷಬ್ ಪಂತ್ (77) ಅರ್ಧಶತಕಗಳ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 336 ರನ್ ಪೇರಿಸಿತು. ಈ ಬೃಹತ್ ಮೊತ್ತವನ್ನು ಇಂಗ್ಲೆಂಡ್ ಸಲೀಸಾಗಿಯೇ ಬೆನ್ನತ್ತಿತ್ತು.

ಆರಂಭದ ವಿಕೆಟ್ ಗೆ ಜಾನಿ ಬೇರ್ ಸ್ಟೋ-ಜೇಸನ್ ರಾಯ್ 110 ರನ್ ಪೇರಿಸಿದರು. ಬೇರ್ ಸ್ಟೋ ಭರ್ಜರಿ ಶತಕ (124) ದಾಖಲಿಸಿದರೆ ರಾಯ್ 55 ರನ್ ಗಳ ಕೊಡುಗೆ ನೀಡಿದರು. ಬಳಿಕ ಬಂದ ಬೆನ್ ಸ್ಟೋಕ್ಸ್ ಕೇವಲ 52 ಎಸೆತಗಳಲ್ಲಿ 10 ಸಿಕ್ಸರ್ ಸಹಿತ 99 ರನ್ ಗಳಿಸಿ ಔಟಾದರು. ಇವರ ಕೊಡುಗೆಯಿಂದಾಗಿ ಇಂಗ್ಲೆಂಡ್ 43.3 ಓವರ್ ಗಳಲ್ಲೇ 4 ವಿಕೆಟ್ ಕಳೆದುಕೊಂಡು 337 ರನ್ ಗಳಿಸುವ ಮೂಲಕ ಗುರಿ ಮುಟ್ಟಿತು. ಇದರೊಂದಿಗೆ ಸರಣಿ 1-1 ರಿಂದ ಸಮಬಲಗೊಂಡಿತು. ಈ ಸರಣಿಯಲ್ಲಿ ಟಾಸ್ ಪ್ರಮುಖ ಪಾತ್ರವಹಿಸುತ್ತದೆ ಎನ್ನುವುದು ಮತ್ತೆ ಸಾಬೀತಾಯಿತು. ನಾಳೆ ನಡೆಯಲಿರುವ ಪಂದ್ಯದಲ್ಲಿ ಗೆದ್ದವರು ಸರಣಿ ಗೆಲ್ಲಲಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SL: ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಮತ್ತೊಂದು ಆಕ್ರಮಣಕಾರೀ ನಿರ್ಧಾರ

INDvsSL: ಕಾದು ಕಾದು ಸಾಕಾಯ್ತು.. ಕೊನೆಗೂ ಧ್ರುವ ಜ್ಯುರೆಲ್ ಶತಕ ಸಿಡಿಸಿದಾಗ ಗಿಲ್, ಗಂಭೀರ್ ರಿಯಾಕ್ಷನ್ ಹೇಗಿತ್ತು ಗೊತ್ತಾ Video

ನನಗೆ ಆತ ಏನು ಹೇಳಿದ್ದ ಎಂದು ಗೊತ್ತಿಲ್ಲದೇ ಜಡ್ಜ್ ಮಾಡಬೇಡಿ: ಕಿತ್ತಾಡಿದ್ದಕ್ಕೆ ಯಶಸ್ವಿ ಜೈಸ್ವಾಲ್ ಖಡಕ್ ಹೇಳಿಕೆ

IND vs SL: ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್ ಹೊಸ ದಾಖಲೆ

Ind vs SL 2nd TEST: ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿದ ಭಾರತಕ್ಕೆ ಆರಂಭಿಕ ಆಘಾತ

ಮುಂದಿನ ಸುದ್ದಿ
Show comments