Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಜಸ್ಪ್ರೀತ್ ಬುಮ್ರಾ ನೋ ಬಾಲ್ ನದ್ದೇ ಚಿಂತೆ!

ಟೀಂ ಇಂಡಿಯಾ ಜಸ್ಪ್ರೀತ್ ಬುಮ್ರಾ ನೋ ಬಾಲ್ ನದ್ದೇ ಚಿಂತೆ!
ಸೌಥಾಂಪ್ಟನ್ , ಶುಕ್ರವಾರ, 31 ಆಗಸ್ಟ್ 2018 (08:53 IST)
ಸೌಥಾಂಪ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ಇನಿಂಗ್ಸ್ ಕೇವಲ 246 ರನ್ ಗಳಿಗೆ ಸಮಾಪ್ತಿಯಾಗಿದೆ. ಆದರೆ ಭಾರತ ಅತಿಥೇಯರಿಗೆ ಇತರೆ ರನ್ ರೂಪದಲ್ಲಿ ಧಾರಾಳತನ ತೋರಿಸಿದೆ.

ಜಸ್ಪ್ರೀತ್ ಬುಮ್ರಾ, ಸೇರಿದಂತೆ ಟೀಂ ಇಂಡಿಯಾ ಬೌಲರ್ ಗಳು ಎದುರಾಳಿಗಳನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಲು ಯಶಸ್ವಿಯಾಗಿದ್ದೇನೋ ನಿಜ. ಆದರೆ ಒಟ್ಟು 246 ರನ್ ಗಳ ಪೈಕಿ 34 ರನ್ ಗಳನ್ನು ಟೀಂ ಇಂಡಿಯಾ ಇತರೆ ರನ್ ರೂಪದಲ್ಲಿ ನೀಡಿದೆ. ಇದರಲ್ಲಿ ಬೈ 23, ಲೆಗ್ ಬೈ 9 ಮತ್ತು ನೋ ಬಾಲ್ ರೂಪದಲ್ಲಿ 2 ರನ್ ಸೇರಿದೆ.

ಎಷ್ಟೇ ಉತ್ತಮ ಬೌಲಿಂಗ್ ಮಾಡಿದರೂ ಇತರೆ ರನ್ ವಿಚಾರದಲ್ಲಿ ಭಾರತ ಇನ್ನಷ್ಟು ಬಿಗಿಯಾಗಬೇಕಿದೆ ಎನ್ನುವುದು ಇದರಿಂದ ಸಾಬೀತಾಗಿದೆ. ಅದರಲ್ಲೂ ಆಂಗ್ಲರಿಗೆ ಕಡಿವಾಣ ಹಾಕಿ ಬುಮ್ರಾ ಎರಡು ನೋ ಬಾಲ್ ಎಸೆದರು. ಚಾಂಪಿಯನ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಕ್ ವಿರುದ್ಧ ಬುಮ್ರಾ ನೋ ಬಾಲ್ ಎಸೆದು ಭಾರೀ ಟೀಕೆಗೆ ಗುರಿಯಾಗಿದ್ದನ್ನು ಇಲ್ಲಿ ನೆನಪಿಸಬಹುದು. ಆ ಚಾಳಿಯನ್ನು ಅವರು ಟೆಸ್ಟ್ ಕ್ರಿಕೆಟ್ ನಲ್ಲೂ ಬಿಟ್ಟಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ.

ಇನ್ನು ಭಾರತ ಮತ್ತೆ ಬಾಲಂಗೋಚಿಗಳನ್ನು ಕಟ್ಟಿ ಹಾಕಲು ಎಡವಿದೆ. ಪ್ರಮುಖ 6 ವಿಕೆಟ್ ಗಳನ್ನು ಸುಲಭವಾಗಿ ಕಿತ್ತ ಟೀಂ ಇಂಡಿಯಾ ಬೌಲರ್ ಗಳನ್ನು ನಂತರದ ನಾಲ್ಕು ವಿಕೆಟ್ ಪಡೆಯಲು ಹರಸಾಹಸ ಪಡಬೇಕಾಯಿತು. ಸ್ಯಾಮ್ ಕ್ಯುರೇನ್ 78 ರನ್ ಮೊಯಿನ್ ಅಲಿ 40 ರನ್ ಗಳಿಸಿ ಭಾರತವನ್ನು ಕಾಡಿದರು. ಈ ಸಂದರ್ಭದಲ್ಲಿ ಸ್ಪಿನ್ನರ್ ಅಶ್ವಿನ್ ಈಇಬ್ಬರನ್ನೂ ಪೆವಿಲಿಯನ್ ಗೆ ಕಳುಹಿಸಿದರು.  ಇಂಗ್ಲೆಂಡ್ ನ ಪ್ರಥಮ ಇನಿಂಗ್ಸ್ ಮೊತ್ತಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿರುವ ಭಾರತ ನಿನ್ನೆಯ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 19 ರನ್ ಗಳಿಸಿದೆ. ಕೆಎಲ್ ರಾಹುಲ್ 11 ಮತ್ತು ಶಿಖರ್ ಧವನ್ 3 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ವೇಗಿಗಳ ದಾಳಿಗೆ ಇಂಗ್ಲೆಂಡ್ ಕಕ್ಕಾಬಿಕ್ಕಿ