ಮುಂಬೈ: ಆಸ್ಟ್ರೇಲಿಯಾ ಪ್ರವಾಸ ಮುಗಿದ ಬಳಿಕ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲಿದೆ. ಈ ಸರಣಿಯ ವೇಳಾಪಟ್ಟಿ ಪ್ರಕಟವಾಗಿದೆ.
 
									
			
			 
 			
 
 			
			                     
							
							
			        							
								
																	
									
										
								
																	
	
	ಫೆಬ್ರವರಿಯಲ್ಲಿ ಇಂಗ್ಲೆಂಡ್ ಭಾರತ ಪ್ರವಾಸ ಮಾಡಲಿದೆ. ಫೆಬ್ರವರಿ 5 ರಂದು ಚೆನ್ನೈನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಫೆಬ್ರವರಿ 24 ರಂದು ಮೂರನೇ ಟೆಸ್ಟ್ ಗುಜರಾತ್ ನ ಮೊಟೆರಾ ಕ್ರೀಡಾಂಗಣದಲ್ಲಿ ಹಗಲು-ರಾತ್ರಿ ನಡೆಯಲಿದೆ. ದ್ವಿತೀಯ ಟೆಸ್ಟ್ ಪಂದ್ಯ 15 ರಿಂದ ಚೆನ್ನೈನಲ್ಲಿ, ನಾಲ್ಕನೇ ಟೆಸ್ಟ್ ಪಂದ್ಯ ಮಾರ್ಚ್ 4 ರಿಂದ ಅಹಮ್ಮದಾಬಾದ್ ನಲ್ಲಿ ನಡೆಯಲಿದೆ. ಇದಾದ ಬಳಿಕ ಮಾರ್ಚ್ 12, 14, 16, 18 ಮತ್ತು 20 ರಂದು ಐದು ಪಂದ್ಯಗಳ ಟಿ20 ಸರಣಿ ಅಹಮ್ಮದಾಬಾದ್ ನಲ್ಲಿ ನಡೆಯಲಿದೆ. ಇದಾದ ಬಳಿಕ ಪುಣೆಯಲ್ಲಿ ಮಾರ್ಚ್ 23, 26 ಮತ್ತು 28 ರಂದು ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.