Select Your Language

Notifications

webdunia
webdunia
webdunia
webdunia

ಟೀಂ ಮೀಟಿಂಗ್ ನಲ್ಲಿ ಪಾಲ್ಗೊಳ್ಳಲ್ಲ, ಆರಂಭಿಕ ಪಂದ್ಯಗಳನ್ನು ಆಡಲ್ಲ: ಧೋನಿ ಕತೆಯೇನು

Dhoni
ಚೆನ್ನೈ: ಟೀಂ ಮೀಟಿಂಗ್ ಗಳಲ್ಲಿ ಭಾಗಿಯಾಗಲ್ಲ, ಆರಂಭಿಕ ಕೆಲವು ಪಂದ್ಯಗಳನ್ನು ಆಡಲ್ಲ.. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಿರಿಯ ಆಟಗಾರ ಎಂಎಸ್ ಧೋನಿ ಮುಂದಿನ ಕತೆಯೇನು ಎಂದು ಫ್ಯಾನ್ಸ್ ಪ್ರಶ್ನಿಸುತ್ತಿದ್ದಾರೆ.

ಧೋನಿ ಪ್ರಸ್ತುತ ಐಪಿಎಲ್ ಆಡುತ್ತಿರುವ ಹಿರಿಯ ಆಟಗಾರ. ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗಿ ಇಷ್ಟು ವರ್ಷ ಕಳೆದರೂ ಈಗಲೂ ಐಪಿಎಲ್ ನಲ್ಲಿ ಆಡುತ್ತಿದ್ದಾರೆ. ಆದರೆ ಈಗ ಅವರಿಗೆ ಫಿಟ್ನೆಸ್ ಪದೇ ಪದೇ ಕೈಕೊಡುತ್ತಿದೆ. ಇದೇ ಕಾರಣಕ್ಕೆ ಅವರು ಆರಂಭದ ಸುಮಾರು 6 ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎನ್ನಲಾಗಿದೆ.

ಪ್ರಸ್ತುತ ಧೋನಿ ಸ್ನಾಯು ಸೆಳೆತದಿಂದ ಬಳಲುತ್ತಿದ್ದಾರೆ. ಈ ಕಾರಣಕ್ಕೆ ಅವರು ಆರಂಭಿಕ ಪಂದ್ಯಗಳಲ್ಲಿ ಆಡದೇ ಇರಲು ನಿರ್ಧರಿಸಿದ್ದಾರೆ. ಮುಂದೆ ಆಡುತ್ತಾರೋ ಗೊತ್ತಿಲ್ಲ. ಆದರೆ ತಂಡದ ನಾಯಕ ಋತುರಾಜ್ ಗಾಯಕ್ ವಾಡ್ ಪ್ರಕಾರ ಅವರು ತಂಡದ ಮೀಟಿಂಗ್ ಗಳಲ್ಲೂ ಭಾಗಿಯಾಗುತ್ತಿಲ್ಲವಂತೆ.

ಒಂದು ವೇಳೆ ನಾನು ಏನೋ ಸಲಹೆ ನೀಡಿದರೂ ಅದನ್ನು ನೀವು ಪಾಲಿಸಲೇಬೇಕೆಂದೇನಿಲ್ಲ. ತಂಡವನ್ನು ನೀವೇ ನೋಡಿಕೊಳ್ಳಿ ಎಂದು ಋತುರಾಜ್ ಗೆ ಬಿಟ್ಟುಕೊಟ್ಟಿದ್ದಾರಂತೆ. ಸದ್ಯಕ್ಕೆ ಅವರಿಗೆ ಫಿಟ್ನೆಸ್ ಕೂಡಾ ಸಾಥ್ ನೀಡುತ್ತಿಲ್ಲ. ಇದನ್ನು ನೋಡುತ್ತಿದ್ದರೆ ಅವರಿಗೆ ಆಟಗಾರನಾಗಿ ಇದೇ ಕೊನೆಯ ಐಪಿಎಲ್ ಇರಬಹುದು ಎಂಬ ಅನುಮಾನ ಕಾಡುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

IPL 2026: ನಾನಿದ್ದಾಗ ಹೀಗಿರಲಿಲ್ಲ.. ಸಿಎಸ್ ಕೆ ಪರಿಸ್ಥಿತಿ ನೋಡಿ ಭಾವುಕರಾದ ರವೀಂದ್ರ ಜಡೇಜಾ