Daily Horoscope

Select Your Language

Notifications

webdunia
webdunia
webdunia
webdunia

IPL 2026: ಆಹಾ ಕಿಂಗ್.. ಆರ್ ಸಿಬಿ ರಾಕಿಂಗ್.. ಮೊದಲ ಪಂದ್ಯದಲ್ಲೇ ಭರ್ಜರಿ ಗೆಲುವು

Virat Kohli -Devdutt Padikkal
Photo Credit: X
ಬೆಂಗಳೂರು: ಐಪಿಎಲ್ 2026 ರ ಉದ್ಘಾಟನಾ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಆರ್ ಸಿಬಿ 6 ವಿಕೆಟ್ ಗಳಿಂದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದು ಬೀಗಿದೆ.

ಇಂದು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ನಾಯಕ ಇಶಾನ್ ಕಿಶನ್ ಅಬ್ಬರದ 80 ರನ್ ಗಳ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು. ಈ ಬೃಹತ್ ಮೊತ್ತ ಬೆನ್ನತ್ತಿದ ಆರ್ ಸಿಬಿ 15.4 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿತು.

ಇಂದಿನ ಆರ್ ಸಿಬಿ ಬ್ಯಾಟಿಂಗ್ ಹೈಲೈಟ್ ಎಂದರೆ ವಿರಾಟ್ ಕೊಹ್ಲಿ, ದೇವದತ್ತ ಪಡಿಕ್ಕಲ್ ಇನಿಂಗ್ಸ್. ಮೊದಲು ಆರ್ ಸಿಬಿ ಇನಿಂಗ್ಸ್ ಗೆ ಅಡಿಪಾಯ ಹಾಕಿಕೊಟ್ಟಿದ್ದು ದೇವದತ್ತ ಪಡಿಕ್ಕಲ್. ಕೇವಲ 26 ಎಸೆತಗಳಿಂದ 61 ರನ್ ಗಳಿಸಿದ ಅವರು ತಂಡದ ರನ್ ರೇಟ್ ಹೆಚ್ಚಿಸಲು ನೆರವಾದರು.

ಬಳಿಕ ವಿರಾಟ್ ಕೊಹ್ಲಿ ಶೋ. 38 ಎಸೆತಗಳಿಂದ ಕೆಲವು ಮನಮೋಹಕ ಹೊಡೆತಗಳೊಂದಿಗೆ ಅಜೇಯವಾಗಿ 69 ರನ್ ಗಳಿಸಿದ ಕೊಹ್ಲಿ ತಂಡವನ್ನು ಗೆಲುವಿನ ದಡ ಮುಟ್ಟಿದರು. ಇದರ ನಡುವೆ ನಾಯಕ ರಜತ್ ಪಾಟೀದಾರ್ 12 ಎಸೆತಗಳಲ್ಲಿ 32 ರನ್ ಗಳ ಕೊಡುಗೆಯನ್ನೂ ಮರೆಯುವಂತಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಎಸ್‌ಆರ್‌ಎಚ್ ವಿರುದ್ಧ ಬ್ಯಾಟ್ ಹಿಡಿಯುವ ಮುನ್ನಾವೇ ಕಿಂಗ್ ಕೊಹ್ಲಿ ಹೊಸ ರೆಕಾರ್ಡ್‌, ಇದು ನಿಯತ್ತು ಎಂದ ಆರ್‌ಸಿಬಿ ಫ್ಯಾನ್ಸ್‌