Daily Horoscope

Select Your Language

Notifications

webdunia
webdunia
webdunia
webdunia

ಮಹೇಂದ್ರ ಸಿಂಗ್‌ ಧೋನಿ ಇಂಪ್ಯಾಕ್ಟ್ ಆಟಗಾರನಾಗಿ ಬರುವುದಕ್ಕಿಂತ ನಿವೃತ್ತಿಯೇ ಲೇಸು ಎಂದ ಅಶ್ವಿನ್‌

Cricket Legend Mahendra Singh Dhoni, Indian Premier League, Chennai Super Kings
Photo Credit X
ಬೆಂಗಳೂರು: ಭಾರತ ತಂಡದ ಮಾಜಿ ನಾಯಕ, ಕ್ರಿಕೆಟ್‌ ದಿಗ್ಗಜ ಮಹೇಂದ್ರ ಸಿಂಗ್‌ ಧೋನಿ ಅವರ ನಿವೃತ್ತಿಯ ಬಗ್ಗೆ ಚರ್ಚೆ ಜೋರಾಗಿದ್ದಾರೆ. 44 ವರ್ಷದ ಧೋನಿ ಐಪಿಎಲ್‌ ಹೊರತುಪಡಿಸಿ ಉಳಿದ ಕ್ರಿಕೆಟ್‌ಗೆ ಈ ಹಿಂದೆಯೇ ವಿದಾಯ ಹೇಳಿದ್ದಾರೆ.

ಐಪಿಎಲ್ 2026ನೇ ಆವೃತ್ತಿಯಲ್ಲಿ ಧೋನಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಪರ ಆಡಲಿದ್ದಾರೆ. ಸಂಜು ಸ್ಯಾಮ್ಸನ್‌ ವಿಕೆಟ್‌ ಕೀಪರ್‌ ಹೊಣೆ ನಿರ್ವಹಿಸುವುದರಿಂದ ಈ ಆವೃತ್ತಿಯಲ್ಲಿ ಧೋನಿ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ತಂಡವು ಬಳಸಿಕೊಳ್ಳಬಹುದು. ಧೋನಿ ಪಾತ್ರದ ಬಗ್ಗೆ ಇನ್ನೂ ಅನಿಶ್ಚಿತತೆ ಇದೆ.

2020ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ‌ ಧೋನಿ ಐಪಿಎಲ್‌ನಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. 44ನೇ ವಯಸ್ಸಿನಲ್ಲಿ, ಧೋನಿ ಈಗಾಗಲೇ ಐಪಿಎಲ್‌ನಲ್ಲಿ ಕಾಣಿಸಿಕೊಂಡ ಅತ್ಯಂತ ಹಿರಿಯ ಆಟಗಾರರಲ್ಲಿ ಒಬ್ಬರಾಗಿದ್ದು, ಬ್ರಾಡ್ ಹಾಗ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ದಕ್ಷಿಣ ಆಫ್ರಿಕಾದ ಕ್ರಿಕೆಟ್‌ ದಿಗ್ಗಜ ಎಬಿ ಡಿವಿಲಿಯರ್ಸ್ ಧೋನಿ ಕುರಿತು ಪ್ರತಿಕ್ರಿಯಿಸಿ, ಧೋನಿ ಈಗ ಸಿಎಸ್‌ಕೆ ತಂಡದ 'ಟಾಪ್ 6 ಬ್ಯಾಟ್ಸ್‌ಮನ್' ಅಲ್ಲ ಎಂದು ಹೇಳಿದ್ದಾರೆ. 

ಧೋನಿ ಕುರಿತು ಭಾರತದ ಮಾಜಿ ಸ್ಪಿನ್ನರ್‌ ಆರ್‌.ಅಶ್ವಿನ್‌ ಅವರು ಮಾತನಾಡಿದ್ದಾರೆ. ಧೋನಿ ಪ್ರಭಾವಿ ಆಟಗಾರರ ಪಟ್ಟಿಯಲ್ಲಿ ಉಳಿಯಬೇಕೆಂಬುದನ್ನು ನಾನು ಒಪ್ಪುವುದಿಲ್ಲ. ಅವರು ತಂಡದಲ್ಲಿದ್ದರೆ, ಅವರು ಆಡಲೇಬೇಕು. ಅವರು ಬಯಸದಿದ್ದರೆ‌ ಅವರು ಇಡೀ ಆವೃತ್ತಿಯಲ್ಲಿ ಆಡಬಾರದು, ಅಷ್ಟೇ' ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್ ಆಶ್ ಕಿ ಬಾತ್‌ನಲ್ಲಿ ಹೇಳಿದ್ದಾರೆ.

ಧೋನಿ ಆರನೇ ನಂಬರ್ ಬ್ಯಾಟ್ಸ್‌ಮನ್ ಅಲ್ಲ, ನಾನು ಒಪ್ಪುತ್ತೇನೆ. ಧೋನಿಯ ಬ್ಯಾಟಿಂಗ್ ಕೌಶಲ್ಯಕ್ಕಿಂತ ಹೆಚ್ಚಾಗಿ, ನಾಯಕ ರುತುರಾಜ್ ಗಾಯಕ್ವಾಡ್‌ಗೆ ಸಹಾಯ ಮಾಡಲು ಮೈದಾನದಲ್ಲಿ ಅವರ ಉಪಸ್ಥಿತಿಯು ನಿರ್ಣಾಯಕವಾಗಿದೆ. ಅವರು ದ್ವಿಪಾತ್ರವನ್ನು ವಹಿಸಬಲ್ಲರು. ಅವರು ರುತುರಾಜ್‌ಗೆ ಮೈದಾನದಲ್ಲಿ ದಿಕ್ಸೂಚಿಯಾಗಬಹುದು ಎಂದು ಅಶ್ವಿನ್ ಹೇಳಿದರು.

ಸದ್ಯ ಸ್ನಾಯು ಸೆಳೆತದಿಂದ ಬಳಲುತ್ತಿರುವ ಧೋನಿ ಅವರು ಐಪಿಎಲ್‌ನ ಆರಂಭದ ಪಂದ್ಯಗಳನ್ನು ಆಡುತ್ತಿಲ್ಲ. ಅವರು ಯಾವ ಪಂದ್ಯಕ್ಕೆ ಲಭ್ಯರಾಗುತ್ತಾರೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

IPL 2026: ಆಹಾ ಕಿಂಗ್.. ಆರ್ ಸಿಬಿ ರಾಕಿಂಗ್.. ಮೊದಲ ಪಂದ್ಯದಲ್ಲೇ ಭರ್ಜರಿ ಗೆಲುವು