Publish Date: Mon, 30 Mar 2026 (10:39 IST)
Updated Date: Mon, 30 Mar 2026 (10:42 IST)
ಗುವಾಹಟಿ: ಐಪಿಎಲ್ 2026 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರ್ಪಡೆಯಾಗಿರುವ ಜನಪ್ರಿಯ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಗೆ ಇಂದು ಉಭಯ ಸಂಕಟವೊಂದು ಎದುರಾಗಿದೆ.
ಕೇರಳ ಮೂಲದ ವಿಕೆಟ್ ಕೀಪರ್ ಬ್ಯಾಟಿಗ ಸಂಜು ಸ್ಯಾಮ್ಸನ್ ಇದುವರೆಗೆ ರಾಜಸ್ಥಾನ್ ರಾಯಲ್ಸ್ ಪರ ಅಡಿದ್ದರು. ಅದೂ ಕೇವಲ ಆಟಗಾರನಾಗಿ ಅಲ್ಲ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು. 2018 ರಿಂದ ಸತತವಾಗಿ 8 ವರ್ಷ ಅವರು ರಾಜಸ್ಥಾನ್ ತಂಡದಲ್ಲಿದ್ದರು.
ಆದರೆ ಈ ಸೀಸನ್ ಗೆ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬಿಕರಿಯಾಗಿದ್ದರು. ಹೀಗಾಗಿ ಸಿಎಸ್ ಕೆ ಜೊತೆಗೆ ಸಂಜುಗೆ ಇದು ಮೊದಲ ಟೂರ್ನಮೆಂಟ್. ವಿಪರ್ಯಾಸವೆಂದರೆ ನಾಳೆ ಈ ಸಾಲಿನ ಮೊದಲ ಪಂದ್ಯದಲ್ಲೇ ಸಿಎಸ್ ಕೆ-ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಲಿದೆ.
Krishnaveni K
Publish Date: Mon, 30 Mar 2026 (10:39 IST)
Updated Date: Mon, 30 Mar 2026 (10:42 IST)