Select Your Language

Notifications

webdunia
webdunia
webdunia
webdunia

ವಿಶ್ವಕಪ್ 2019 ರ ಟೀಂ ಇಂಡಿಯಾದ ಕೊನೆಯ ಪಂದ್ಯ ಧೋನಿ ಪಾಲಿಗೆ ಅಂತಿಮ ಪಂದ್ಯ?!

ವಿಶ್ವಕಪ್ 2019 ರ ಟೀಂ ಇಂಡಿಯಾದ ಕೊನೆಯ ಪಂದ್ಯ ಧೋನಿ ಪಾಲಿಗೆ ಅಂತಿಮ ಪಂದ್ಯ?!
ಲಂಡನ್ , ಗುರುವಾರ, 4 ಜುಲೈ 2019 (09:09 IST)
ಲಂಡನ್: ಬ್ಯಾಟಿಂಗ್ ನಲ್ಲಿ ಎಂದಿನ ಮೊನಚು ಇಲ್ಲದೇ ಇರುವುದು, ಕೀಪಿಂಗ್ ನಲ್ಲಿ ಮಾಡಿರುವ ಒಂದೆರಡು ತಪ್ಪುಗಳು ಟೀಂ ಇಂಡಿಯಾ ಹಿರಿಯ ವಿಕೆಟ್ ಕೀಪರ್ ಧೋನಿಯನ್ನು ಟೀಕಾಕಾರರ ಬಾಯಿಗೆ ಆಹಾರವಾಗಿಸಿದೆ.


ಇದೀಗ ಮತ್ತೆ ಧೋನಿ ನಿವೃತ್ತಿ ಬಗ್ಗೆ ಮಾತುಗಳು ಕೇಳಿಬಂದಿದೆ. ಧೋನಿ 2019 ರ ವಿಶ್ವಕಪ್ ಕೂಟದ ಟೀಂ ಇಂಡಿಯಾ ಕೊನೆಯ ಪಂದ್ಯದಲ್ಲಿ ನಿವೃತ್ತಿ ಹೇಳುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬಂದಿವೆ.

ಒಂದು ವೇಳೆ ಜುಲೈ 14 ರಂದು ನಡೆಯಲಿರುವ ಫೈನಲ್ ಪಂದ್ಯಕ್ಕೆ ಟೀಂ ಇಂಡಿಯಾ ಎಂಟ್ರಿಯಾದರೆ ಆ ಪಂದ್ಯವೇ ಧೋನಿ ಪಾಲಿಗೆ ವಿದಾಯ ಪಂದ್ಯವಾಗುವ ಸಾಧ್ಯತೆಯಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಆಂಗ್ಲ ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ಈಗ ವೈರಲ್ ಆಗಿದೆ. ಆದರೆ ಈ ಬಗ್ಗೆ ಧೋನಿ ಅಥವಾ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ನಿಂದ ಅಧಿಕೃತವಾಗಿ ಬಂದಿಲ್ಲ. ಹಿಂದೆಯೂ ಹಲವು ಬಾರಿ ಧೋನಿ ನಿವೃತ್ತಿ ಬಗ್ಗೆ ಮಾತುಗಳು ಕೇಳಿಬಂದಿತ್ತು. ಈಗ ಮತ್ತೆ ಅದಕ್ಕೆ ಚಾಲನೆ ಸಿಕ್ಕಿದೆ. ಈ ಬಾರಿ ಊಹಾಪೋಹಗಳನ್ನು ಧೋನಿ ನಿಜ ಮಾಡುತ್ತಾರೆಯೇ ಎಂದು ಕಾದುನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಮುರಿದ ಹೆಬ್ಬರಳಿಗೆ ಬದಲಾಗಿ ನಮ್ಮ ಕೈ-ಕಾಲು ತೆಗೆದುಕೊಳ್ಳಿ! ಶಿಖರ್ ಧವನ್ ಗೆ ಅಭಿಮಾನಿಗಳಿಂದ ಮನವಿ!