Select Your Language

Notifications

webdunia
webdunia
webdunia
Friday, 11 April 2025
webdunia

ಭಾರತ-ಬಾಂಗ್ಲಾ ಪಂದ್ಯದ ವೇಳೆ ಕೀಪಿಂಗ್ ಬಿಟ್ಟು ಮೈದಾನದಿಂದ ಹೊರಹೋಗಿ ಟ್ರೋಲ್ ಆದ ಧೋನಿ

ಧೋನಿ
ಲಂಡನ್ , ಗುರುವಾರ, 4 ಜುಲೈ 2019 (09:01 IST)
ಲಂಡನ್: ಬಾಂಗ್ಲಾದೇಶದ ವಿರುದ್ಧ ಮೊನ್ನೆ ನಡೆದ ವಿಶ್ವಕಪ್ ಪಂದ್ಯದ ವೇಳೆ ಕೆಲವು ಕಾಲ ಮೈದಾನದಿಂದ ಹೊರನಡೆದ ವಿಕೆಟ್ ಕೀಪರ್ ಧೋನಿ ಟ್ರೋಲ್ ಗೊಳಗಾಗಿದ್ದಾರೆ.


ನಿಧಾನಗತಿಯ ಬ್ಯಾಟಿಂಗ್ ನಿಂದಾಗಿ ಟೀಕೆಗೊಳಗಾಗಿದ್ದ ಧೋನಿ ಈ ಪಂದ್ಯದಲ್ಲಿ ಕೆಲವು ಕ್ಷಣಗಳ ಕಾಲ ಮೈದಾನದಿಂದ ಹೊರನಡೆದಿದ್ದಕ್ಕೆ ಟ್ರೋಲ್ ಗೊಳಗಾಗಿದ್ದಾರೆ.

ಬಾಂಗ್ಲಾದೇಶ ಇನಿಂಗ್ಸ್ ನ 12 ನೇ ಓವರ್ ನಲ್ಲಿ ಇದ್ದಕ್ಕಿದ್ದಂತೆ ವಿಕೆಟ್ ಕೀಪಿಂಗ್ ಮಾಡುವುದು ಬಿಟ್ಟು ಪೆವಿಲಿಯನ್ ನತ್ತ ಧೋನಿ ಮರಳಿದಾಗ ರಿಷಬ್ ಪಂತ್ ಕೀಪಿಂಗ್ ಮಾಡಿದರು. ಧೋನಿ ಈ ರೀತಿ ಏಕಾಏಕಿ ಮೈದಾನದಿಂದ ಹೊರನಡೆದಿರುವುದಕ್ಕೆ ಟ್ವಿಟರ್ ನಲ್ಲಿ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

ಧೋನಿ ಏನು ಸರ್ಕಾರಿ ಕೆಲಸ ಮಾಡ್ತಿದ್ದೀರಾ? ತಮಗೆ ಬೇಕಾದಾಗ ಮೈದಾನಕ್ಕೆ ಬರುವುದು ಹೋಗುವುದು ಮಾಡಲು? ಎಂದು ಕೆಲವರು ಟ್ರೋಲ್ ಮಾಡಿದ್ದಾರೆ. ಮತ್ತೆ ಕೆಲವರು ಧೋನಿಗೆ ಏನಾಯ್ತು? ಅವರಿಗೂ ಕೆಡುಕೇನೂ ಆಗಿರದೇ ಇದ್ದರೆ ಸಾಕು ಎಂದು ಕಾಮೆಂಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಕ್ಸರ್ ಹೊಡೆತಕ್ಕೆ ಏಟು ತಿಂದ ಅಭಿಮಾನಿ ಯುವತಿಗೆ ರೋಹಿತ್ ಶರ್ಮಾ ಕೊಟ್ಟ ಗಿಫ್ಟ್ ಏನು ಗೊತ್ತಾ?