Select Your Language

Notifications

webdunia
webdunia
webdunia
webdunia

ನಿಮ್ಮ ಮುರಿದ ಹೆಬ್ಬರಳಿಗೆ ಬದಲಾಗಿ ನಮ್ಮ ಕೈ-ಕಾಲು ತೆಗೆದುಕೊಳ್ಳಿ! ಶಿಖರ್ ಧವನ್ ಗೆ ಅಭಿಮಾನಿಗಳಿಂದ ಮನವಿ!

ನಿಮ್ಮ ಮುರಿದ ಹೆಬ್ಬರಳಿಗೆ ಬದಲಾಗಿ ನಮ್ಮ ಕೈ-ಕಾಲು ತೆಗೆದುಕೊಳ್ಳಿ! ಶಿಖರ್ ಧವನ್ ಗೆ ಅಭಿಮಾನಿಗಳಿಂದ ಮನವಿ!
ನವದೆಹಲಿ , ಗುರುವಾರ, 4 ಜುಲೈ 2019 (09:05 IST)
ನವದೆಹಲಿ: ಹೆಬ್ಬಳರಿನ ಮುರಿತಕ್ಕೊಳಗಾಗಿ ವಿಶ್ವಕಪ್ ನಿಂದ ಅರ್ಧದಲ್ಲಿಯೇ ಹೊರ ನಡೆದ ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ರನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿದ್ದಾರೆ.


ಬಾಂಗ್ಲಾದೇಶ ವಿರುದ್ಧ ರೋಹಿತ್ ಶರ್ಮಾ ಶತಕ ಸಿಡಿಸಿದ್ದಕ್ಕೆ ಶಿಖರ್ ಧವನ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಅಭಿನಂದನೆ ಸಲ್ಲಿಸಿದ್ದರು. ಹಿಟ್ ಮ್ಯಾನ್ ಗೆ ಶುಭ ಕೋರಿದ ಧವನ್ ಟ್ವೀಟ್ ನೋಡಿ ಅಭಿಮಾನಿಗಳು ರೋಹಿತ್ ಜತೆ ನೀವೂ ಇರಬೇಕಿತ್ತು. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಒಬ್ಬರಂತೂ ನಿಮ್ಮ ಮುರಿದ ಹೆಬ್ಬರಳಿಗೆ ಬದಲಾಗಿ ನಮ್ಮ ಕೈಯನ್ನೇ ತೆಗೆದುಕೊಳ್ಳಿ. ನೀವು 2019 ರ ವಿಶ್ವಕಪ್ ಗೆ ಮರಳಿ ಬನ್ನಿ. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ ಎಂದು ಬರೆದಿದ್ದಾರೆ. ಹಿಟ್ ಮ್ಯಾನ್  ರೋಹಿತ್ ಜತೆಗೆ ಶಿಖರ್ ಧವನ್ ಟೀಂ ಇಂಡಿಯಾ ಪರ ಅತ್ಯುತ್ತಮ ಆರಂಭಿಕ ಜೋಡಿ ಎಂದು ಸಾಬೀತುಪಡಿಸಿದ್ದಾರೆ. ಹೀಗಾಗಿ ಈ ಜೋಡಿ ಹೊಡೆಬಡಿಯ ಜೋಡಿಯನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಬಾಂಗ್ಲಾ ಪಂದ್ಯದ ವೇಳೆ ಕೀಪಿಂಗ್ ಬಿಟ್ಟು ಮೈದಾನದಿಂದ ಹೊರಹೋಗಿ ಟ್ರೋಲ್ ಆದ ಧೋನಿ