ದೇಶ್ ಗೌರವ್ ಸೇಖ್ರಿ ಪುಸ್ತಕ ''ನಾಟ್ ಔಟ್ '' ಇಂಡಿಯನ್ ಪ್ರೀಮಿಯರ್ ಲೀಗ್ ಬೆಳೆದುಬಂದ ಸೋಜಿಗದ ಕಥೆಯಾಗಿದ್ದು, ಶ್ರೀಮಂತ ಕ್ರಿಕೆಟ್ ಪಂದ್ಯಾವಳಿಯ ವಿವರಗಳನ್ನು ಬಿಚ್ಚಿಡುತ್ತದೆ. ಸೇಖ್ರಿ ಪುಸ್ತಕದುದ್ದಕ್ಕೂ ಜನರು ಐಪಿಎಲ್ ದ್ವೇಷಿಸಲಿ ಅಥವಾ ಪ್ರೀತಿಸಲಿ ಅದನ್ನು ಕಡೆಗಣಿಸಲಾಗುವುದಿಲ್ಲ ಎಂಬ ಕಲ್ಪನೆಯನ್ನು ಕಾಯ್ದುಕೊಂಡಿದ್ದಾರೆ.
ಪುಸ್ತಕದ ಆರಂಭದಲ್ಲಿ ಸೇಖ್ರಿ ಐಪಿಎಲ್‌ನ ಹಣಕಾಸು ಮಾದರಿ ಹೇಗೆ ಕ್ರಿಕೆಟ್‌ನಲ್ಲಿ, ಆಟಗಾರರಲ್ಲಿ ಬಂಡವಾಳ ಹಿಂದೆಂದೂ ಕಾಣದಂತೆ ಹರಿದುಬಂದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಹೆಸರು ಪಡೆದಿರದ ಕೆಲವು ಆಟಗಾರರ ವೇತನ ಐಪಿಎಲ್‌ನಲ್ಲಿ ಕುತೂಹಲ ಕೆರಳಿಸಿದ್ದು, ಅದರಿಂದ ಕೆಲವು ಅಡ್ಡಪರಿಣಾಮಗಳೂ ಉಂಟಾಗಿವೆ. ನಾಟ್ ಔಟ್ ಗಮನ ಸೆಳೆದಿರುವಂತೆ, ಹೆಚ್ಚುವರಿ ಹಣಕಾಸಿನ ಕನಸು ದೇಶೀಯ ಮಟ್ಟದಲ್ಲಿ ಪ್ರದರ್ಶನ ನೀಡುವ ಪ್ರೇರಣೆಯನ್ನು ಕುಂದಿಸಿದೆ. ಸೇಖ್ರಿ ತಮ್ಮ ವಾದಗಳನ್ನು ಸತ್ಯಾಂಶಗಳಿಂದ ಬೆಂಬಲಿಸಿದ್ದು, 2013ರ ಸ್ಪಾಟ್ ಫಿಕ್ಸಿಂಗ್ ಹಗರಣವು 2007 ವಿಶ್ವ ಟಿ 20 ಮತ್ತು 2011ರ ವಿಶ್ವ ಕಪ್ ವಿಜೇತ ಕ್ರಿಕೆಟ್ ತಂಡದ ಶ್ರೀಶಾಂತ್ ವೃತ್ತಿಜೀವನವನ್ನು ಮೊಟಕು ಮಾಡಿದ ಬಗ್ಗೆ ಗಮನಸೆಳೆದಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಅಧಿಕಾರಿ ಗುರುನಾಥ್ ಮೇಯಪ್ಪನ್ ಮತ್ತು ರಾಜಸ್ಥಾನ್ ರಾಯಲ್ಸ್ ರಾಜ್ ಕುಂದ್ರಾ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದರಿಂದ ರಾಜಸ್ಥಾನ ಅಂಕಿತ್ ಚವಾಣ್, ಅಜಿತ್ ಚಾಂಡಿಲಾ ಮುಂತಾದ ಆಟಗಾರರ ಹೆಸರು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಕಾಣಿಸಿಕೊಂಡಿದ್ದರಿಂದ ಉಂಟಾದ ಹಾನಿಯನ್ನು ವಿಶ್ಲೇಷಿಸಲಾಗಿದೆ.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.