2013ರಲ್ಲಿ 9ನೇ ಸ್ಥಾನ, 2014ರಲ್ಲಿ 8ನೇ ಸ್ಥಾನ ಮತ್ತು 2015ರಲ್ಲಿ ಏಳನೇ ಸ್ಥಾನ. 2016ರಲ್ಲಿ 2ನೇ ಸ್ಥಾನ. ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಐಪಿಎಲ್ ಅರ್ಧ ಹಂತದಲ್ಲಿ ಈ ಮಟ್ಟಕ್ಕೆ ಮುಟ್ಟುತ್ತದೆಂದು ಯಾರೊಬ್ಬರೂ ಎಣಿಸಿರಲಿಲ್ಲ.
ತಂಡದಲ್ಲಿ ಅಷ್ಟೊಂದು ಖ್ಯಾತಿವೆತ್ತ ಆಟಗಾರರು ಇರದಿದ್ದರೂ, ಡೆಲ್ಲಿಯಲ್ಲಿ ಕ್ರಿಕೆಟರುಗಳನ್ನು ಚಾಂಪಿಯನ್ನರನ್ನಾಗಿ ಮಾಡುವ ಕಲೆಯನ್ನು ಒಬ್ಬರು ಅರಿತಿದ್ದಾರೆ. ದೆಹಲಿಯ ಹೊಸ ಮಾರ್ಗದರ್ಶಕ ರಾಹುಲ್ ದ್ರಾವಿಡ್ ಗ್ಯಾರಿ ಕಿರ್ಸ್ಟನ್ ಅವರ ನಂತರ ಕೋಚಿಂಗ್ ಸ್ಥಾನ ಅಲಂಕರಿಸಿದ್ದು, ಕಿರ್ಸ್ಟನ್ ಸಾಧಿಸಲು ಸಾಧ್ಯವಾಗದ ಕೆಲಸವನ್ನು ದ್ರಾವಿಡ್ ಸಾಧಿಸಿದ್ದಾರೆ.
ಏಳು ಪಂದ್ಯಗಳನ್ನು ಆಡಿದ ಬಳಿಕ ಡೆಲ್ಲಿ ನಂ. 2ರ ಸ್ಥಾನದಲ್ಲಿ ಐದು ಗೆಲುವುಗಳಿಂದ 10 ಪಾಯಿಂಟ್ ಸಂಪಾದಿಸಿದೆ. 6 ಪಂದ್ಯಗಳಲ್ಲಿ 5 ಗೆಲುವು ದ್ರಾವಿಡ್ ಪ್ರಭಾವ ಹೇಗೆ ಪರಿಣಾಮ ಬೀರುತ್ತದೆಂಬುದಕ್ಕೆ ಸಾಕ್ಷಿಯಾಗಿದೆ. ದ್ರಾವಿಡ್ ತಂತ್ರಗಳನ್ನು ಅನುಷ್ಠಾನಕ್ಕೆ ತರಲು ಡೆಲ್ಲಿಯಲ್ಲಿ ಅನುಭವಿ ನಾಯಕ ಜಹೀರ್ ಖಾನ್ ಕೂಡ ಕೈಜೋಡಿಸಿದ್ದಾರೆ.
ದ್ರಾವಿಡ್ ಪ್ರೇರಣೆಯಿಂದ ಜಹೀರ್ ಅವರನ್ನು ನಾಯಕರನ್ನಾಗಿ ನೇಮಕ ಮಾಡಲಾಗಿದ್ದು, ಇಬ್ಬರು ಯುವ ತಂಡವನ್ನು ಪಟ್ಟಿಯಲ್ಲಿ ಮೇಲಿನ ಸ್ಥಾನಕ್ಕೆ ತಂದಿರಿಸಿದ್ದಾರೆ.