Select Your Language

Notifications

webdunia
webdunia
webdunia
webdunia

ಐಪಿಎಲ್ ನಾಕೌಟ್: ಡೆಲ್ಲಿ ಡೇ‌ರ್ ಡೆವಿಲ್ಸ್ ಪ್ಲೇ ಆಫ್ ಕನಸು ಜೀವಂತ

delhi devils
ದೆಹಲಿ , ಮಂಗಳವಾರ, 17 ಮೇ 2016 (15:37 IST)
ಸತತ ಎರಡು ಪಂದ್ಯಗಳಿಂದ ಸೋತು ಚರ್ಜರಿತವಾಗಿದ್ದ ಡೆಲ್ಲಿ ಡೇರ್ ಡೆವಿಲ್ಸ್  ತಂಡವು ಬಲಿಷ್ಠ ಸನ್ ರೈಸರ್ಸ್ ವಿರುದ್ಧ ಭರ್ಜರಿ ಜಯಗಳಿಸಿ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. 
ಡೆಲ್ಲಿ ಡೇರ್ ಡೆವಿಲ್ಸ್ (ಪಾಯಿಂಟ್ 12, ನೆಟ್ ರನ್ ರೇಟ್-0.038)
ಉಳಿದಿರುವ ಪಂದ್ಯಗಳು
ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ವಿರುದ್ಧ, ವಿಜಾಗ್, 17 ಮೇ 2016
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಪುರ, 20 ಮೇ 2016
ರಾಯಲ್ ಚಾಲೆಂಜರ್ಸ್ ವಿರುದ್ಧ ರಾಯ್‌ಪುರ, 22 ಮೇ 2016
 ಡೆಲ್ಲಿ ಡೇರ್ ಡೆವಿಲ್ಸ್ ಉಳಿದ ಎಲ್ಲಾ ಪಂದ್ಯಗಳನ್ನು ಗೆದ್ದರೆ, ಅರ್ಹತೆ ಪಡೆಯುವುದು ಖಚಿತ. ಆದರೆ ಟಾಪ್ 2ರಲ್ಲಿ ಸ್ಥಾನ ಪಡೆಯುವುದು ಸನ್ ರೈಸರ್ಸ್ ಮತ್ತು ನೈಟ್ ರೈಡರ್ಸ್‌ನ ಉಳಿದ ಪಂದ್ಯಗಳ ಫಲಿತಾಂಶ ಆಧರಿಸಿದೆ.
 
ಮೂರು ಪಂದ್ಯಗಳ ಪೈಕಿ ಕನಿಷ್ಠ ಒಂದು ಪಂದ್ಯವನ್ನು ಸೋತರೂ ಅದರ ನೆಟ್ ರನ್ ರೇಟ್ ಇಳಿಮುಖವಾಗುತ್ತದೆ. ಇನ್ನುಳಿದ ಎಲ್ಲಾ ಪಂದ್ಯಗಳಲ್ಲಿ ಸೋತರೆ ಅದು ಪ್ಲೇಆಫ್‌ಗೆ ಪ್ರವೇಶಿಸದೇ ಹೊರಬೀಳುತ್ತದೆ. 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ನಾಕೌಟ್: ಮುಂಬೈ ಇಂಡಿಯನ್ಸ್‌ ಪ್ಲೇ ಆಫ್ ಹಂತ ಪ್ರವೇಶಿಸುವುದೇ?