ಮುಂಬೈ ಇಂಡಿಯನ್ಸ್ ಮೊದಲ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಸೋತು ಸಂಕಷ್ಟದಲ್ಲಿತ್ತು. ಮುಂಬೈ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡಿಲ್ಲ ಎಂದು ಆ ತಂಡದ ಕೋಚ್ ಪಾಂಟಿಂಗ್ ಪ್ರತಿಕ್ರಿಯಿಸಿದ್ದರು. ಮುಂಬೈ ಇಂಡಿಯನ್ಸ್ ಆರಂಭದ ಪಂದ್ಯಗಳಲ್ಲಿ ಸೋಲಪ್ಪಿದರೂ ಬಳಿಕ ಚೇತರಿಸಿಕೊಂಡು ಪಾಯಿಂಟ್ ಪಟ್ಟಿಯಲ್ಲಿ ಮೇಲೇರಿದೆ.
ಮುಂಬೈ ಇಂಡಿಯನ್ಸ್( ಪಾಯಿಂಟ್ 14, ನೆಟ್ ರನ್ ರೇಟ್-0.082)
ಉಳಿದಿರುವ ಪಂದ್ಯ
ಗುಜರಾತ್ ಲಯನ್ಸ್ ವಿರುದ್ಧ , ಕಾನ್ಪುರ, 21 ಮೇ 2016
ಗುಜರಾತ್ ಲಯನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಜಯಗಳಿಸಿದರೂ ಅದರ ಪ್ರಗತಿಯು ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಫಲಿತಾಂಶಗಳನ್ನು ಆಧರಿಸಿದೆ.
ಮುಂಬೈ ಇಂಡಿಯನ್ಸ್‌ಗೆ ಇನ್ನು ಒಂದು ಪಂದ್ಯಮಾತ್ರ ಉಳಿದಿದ್ದು, ಗುಜರಾತ್ ಲಯನ್ಸ್ ವಿರುದ್ಧ ಅದು ಸೋತ ಸಂದರ್ಭದಲ್ಲಿ ಡೇರ್ ಡೆವಿಲ್ಸ್ ಕನಿಷ್ಠ 2 ಪಂದ್ಯಗಳಲ್ಲಿ ಸೋಲಬೇಕು ಮತ್ತು ರಾಯಲ್ ಚಾಲೆಂಜರ್ ಒಂದು ಪಂದ್ಯದಲ್ಲಿ ಸೋತರೆ ಮಾತ್ರ ಅದು ನಾಲ್ಕನೇ ಸ್ಥಾನಕ್ಕೆ ಜಿಗಿಯಲು ಸಾಧ್ಯವಾಗುತ್ತದೆ. ಆದಾಗ್ಯೂ ಮುಂಬೈ ಇಂಡಿಯನ್ಸ್ ನೆಟ್ ರನ್ ರೇಟ್ ಎರಡೂ ತಂಡಗಳಿಗಿಂತ ಕೆಳಗಿವೆ.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.