ಗುಜರಾತ್ ಲಯನ್ಸ್ ಹೊಸ ತಂಡವು ರೈನಾ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಆದರೆ ಅದರ ಕಳಪೆ ರನ್ ರೇಟ್‌ನಿಂದಾಗಿ ಟಾಪ್ 2 ಪ್ರವೇಶ ಕಷ್ಟವಾಗಬಹುದು.
ಉಳಿದಿರುವ ಪಂದ್ಯಗಳು
ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ, ಕಾನ್ಪುರ, 19 ಮೇ 2016
ಮುಂಬೈ ಇಂಡಿಯನ್ಸ್ ವಿರುದ್ಧ, ಕಾನ್ಪುರ, 21 ಮೇ 2016
ಗುಜರಾತ್ ಲಯನ್ಸ್ ಎರಡೂ ಪಂದ್ಯಗಳನ್ನು ಗೆದ್ದರೆ, ಅವರು ಖಂಡಿತವಾಗಿ ಅರ್ಹತೆ ಗಳಿಸುತ್ತಾರೆ ಮತ್ತು ಟಾಪ್ 2 ಸ್ಥಾನಗಳು ಉಳಿದ ಫಲಿತಾಂಶಗಳ ಮೇಲೆ ಅವಲಂಬಿತವಾಗಿದೆ. ಅದರ ನೆಟ್ ರನ್ ರೇಟ್ ಸಪ್ಪೆಯಾಗಿದ್ದು, -0.747 ರಷ್ಟಿದೆ.
ಅದು ಉಳಿದ ಎರಡು ಪಂದ್ಯಗಳಲ್ಲಿ ಜಯಗಳಿಸುವ ಮೂಲಕ ಪ್ಲೇ ಆಫ್ ಪ್ರವೇಶಿಸಬಹುದು. ಆದರೆ ಟಾಪ್ ಎರಡು ಸ್ಥಾನವನ್ನು ಮುಟ್ಟುವುದು ಅದರ ನಕಾರಾತ್ಮಕ ನೆಟ್ ರನ್ ರೇಟ್‌ನಿಂದ ಕಷ್ಟವಾಗಬಹುದು.
ಇನ್ನುಳಿದ ಪಂದ್ಯಗಳಲ್ಲಿ ಸೋತ ಸಂದರ್ಭದಲ್ಲಿ, ಡೆಲ್ಲಿ ಡೇರ್ ಡೆವಿಲ್ಸ್ ಕನಿಷ್ಠ 2 ಪಂದ್ಯಗಳಲ್ಲಿ ಸೋತಾಗ ಮತ್ತು ರಾಯಲ್ ಚಾಲೆಂಜರ್ಸ್ ಒಂದು ಪಂದ್ಯ ಸೋತರೆ ಮಾತ್ರ ಅದು ಪ್ಲೇಆಫ್ ಪ್ರವೇಶಿಸುವುದಕ್ಕೆ ಸಾಧ್ಯವಾಗುತ್ತದೆ. ಆದರೆ ಹೆಚ್ಚಿನ ಅಂತರದಲ್ಲಿ ಈ ಸೋಲುಗಳಿರಬೇಕು. ಏಕೆಂದರೆ ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ರಾಯಲ್ ಚಾಲೆಂಜರ್ಸ್‌ಗೆ ಹೋಲಿಸಿದರೆ ಅದರ ನೆಟ್ ರನ್ ರೇಟ್ ಕಳಪೆಯಾಗಿದೆ.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.