Select Your Language

Notifications

webdunia
webdunia
webdunia
webdunia

ಅನ್ ಫಿಟ್ ಆದ್ರೂ ಡೇವಿಡ್ ವಾರ್ನರ್ ಮೂರನೇ ಟೆಸ್ಟ್ ಆಡ್ತಾರೆ!

ಅನ್ ಫಿಟ್ ಆದ್ರೂ ಡೇವಿಡ್ ವಾರ್ನರ್ ಮೂರನೇ ಟೆಸ್ಟ್ ಆಡ್ತಾರೆ!
ಸಿಡ್ನಿ , ಶುಕ್ರವಾರ, 1 ಜನವರಿ 2021 (09:30 IST)
ಸಿಡ್ನಿ: ಭಾರತದ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯವನ್ನು ಸೋತ ಹತಾಶೆಯಲ್ಲಿರುವ ಆಸ್ಟ್ರೇಲಿಯಾ ತನ್ನ ಹೊಡೆಬಡಿಯ ಡೇವಿಡ್ ವಾರ್ನರ್ ಅವರನ್ನು ಶತಾಯ ಗತಾಯ ಕರೆತರಲು ಪ್ರಯತ್ನಿಸಿದೆ.


ಗಾಯಗೊಂಡು ಮೊದಲ ಎರಡು ಟೆಸ್ಟ್ ನಿಂದ ಹೊರಗುಳಿದಿದ್ದ ವಾರ್ನರ್ ಇನ್ನೂ ಕೂಡಾ ಶೇ. 100 ರಷ್ಟು ಫಿಟ್ ಆಗಿಲ್ಲ. ಆದರೆ ಕಳೆದ ಪಂದ್ಯದಲ್ಲಿ ದಯನೀಯ ಬ್ಯಾಟಿಂಗ್ ವೈಫಲ್ಯದ ನಂತರ ಆಸೀಸ್ ತಂಡ 100 ಶೇಕಡಾ ಫಿಟ್ ಇಲ್ಲದೇ ಹೋದರೂ ವಾರ್ನರ್ ರನ್ನು ಮೂರನೇ ಟೆಸ್ಟ್ ನಲ್ಲಿ ಆಡಿಸಲು ನಿರ್ಧರಿಸಿದೆ. ಈ ಬಗ್ಗೆ ಸ್ವತಃ ಕೋಚ್ ಮೆಕ್ ಡೊನಾಲ್ಡ್ ಹೇಳಿಕೆ ನೀಡಿದ್ದಾರೆ. ಹೀಗಾಗಿ ಮುಂದಿನ ಟೆಸ್ಟ್ ನ್ನು ವಾರ್ನರ್ ಆಡುವುದು ಖಚಿತವಾಗಿದೆ. ಅಸಲಿಗೆ ಸ್ಟೀವ್ ಸ್ಮಿತ್ ಕೂಡಾ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಅವರೂ ಕೂಡಾ ಫಿಟ್ ಅಲ್ಲದೇ ಇದ್ದರೂ ಭಾರತದ ವಿರುದ್ಧದ ಸರಣಿ ಮಹತ್ವದ್ದಾಗಿರುವುದರಿಂದ ಆಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಉಮೇಶ್ ಯಾದವ್ ಗೆ ಗಾಯ: ಯುವವೇಗಿಗಳಿಗೆ ಲಾಭ