Daily Horoscope

Select Your Language

Notifications

webdunia
webdunia
webdunia
webdunia

ಉಮೇಶ್ ಯಾದವ್ ಗೆ ಗಾಯ: ಯುವವೇಗಿಗಳಿಗೆ ಲಾಭ

ಉಮೇಶ್ ಯಾದವ್
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡ ವೇಗಿ ಉಮೇಶ್ ಯಾದವ್ ಸರಣಿಯಿಂದ ಹೊರಬಿದ್ದಿದ್ದಾರೆ. ಇದರಿಂದಾಗಿ ಮುಂದಿನ ಟೆಸ್ಟ್ ಪಂದ್ಯಗಳಿಗೆ ಯುವ ಆಟಗಾರರಿಗೆ ಅವಕಾಶ ಸಿಗಲಿದೆ.


ಸದ್ಯಕ್ಕೆ ಇಶಾಂತ್ ಗಾಯದಿಂದ ಚೇತರಿಸಿಕೊಂಡಿಲ್ಲ. ಮೊಹಮ್ಮದ್ ಶಮಿ ಮೊದಲ ಪಂದ್ಯದಲ್ಲೇ ಗಾಯದಿಂದಾಗಿ ಹೊರಬಿದ್ದಿದ್ದಾರೆ. ಹೀಗಾಗಿ ಜಸ್ಪ್ರೀತ್ ಬುಮ್ರಾ ಒಬ್ಬರೇ ಅನುಭವಿ ವೇಗಿ. ಇನ್ನುಳಿದ ಪಂದ್ಯಗಳಿಗೆ ಅನಿವಾರ್ಯವಾಗಿ ಭಾರತ ಬುಮ್ರಾ, ಮೊಹಮ್ಮದ್ ಸಿರಾಜ್ ಜೊತೆಗೆ ಬೌಲಿಂಗ್ ಮಾಡಲು ಮತ್ತೊಬ್ಬ ಯುವ ವೇಗಿಯನ್ನು ಆಯ್ಕೆ ಮಾಡಬೇಕಿದೆ. ಆ ಸ್ಥಾನ ಈಗ ಟಿ ನಟರಾಜನ್ ಅಥವಾ ಶ್ರಾದ್ಧೂಲ್ ಠಾಕೂರ್ ಇಬ್ಬರಲ್ಲಿ ಒಬ್ಬರಿಗೆ ಸಿಗಲಿದೆ. ಆಸ್ಟ್ರೇಲಿಯಾದಲ್ಲಿ ಬೌಲಿಂಗ್ ಮಾಡುವುದು ವೇಗಿಗಳ ಕನಸಾಗಿರುತ್ತದೆ. ಆ ಕನಸು ಈಗ ಯಾರ ಪಾಲಿಗೆ ಒಲಿಯಲಿದೆ ಎಂದು ಕಾದು ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾಕ್ಕೆ ಬಿಗ್ ಶಾಕ್: ತಂಡದಿಂದ ಹೊರಬಿದ್ದ ಉಮೇಶ್ ಯಾದವ್