Publish Date: Thu, 31 Dec 2020 (09:51 IST)
Updated Date: Thu, 31 Dec 2020 (09:52 IST)
ಮೆಲ್ಬೋರ್ನ್: ಕ್ವಾರಂಟೈನ್ ಅವಧಿ ಮುಗಿಸಿ ಟೀಂ ಇಂಡಿಯಾವನ್ನು ಸೇರಿಕೊಂಡ ಹಿಟ್ ಮ್ಯಾನ್ ರೋಹಿತ್ ಶರ್ಮಾಗೆ ಭರ್ಜರಿ ಸ್ವಾಗತ ಸಿಕ್ಕಿದೆ.
ರೋಹಿತ್ ಶರ್ಮಾ ಟೀಂ ಇಂಡಿಯಾದ ಇತರ ಆಟಗಾರರು ಉಳಿದುಕೊಂಡಿರುವ ಹೋಟೆಲ್ ಗೆ ಆಗಮಿಸುತ್ತಿದ್ದಂತೇ ಕೋಚ್ ರವಿಶಾಸ್ತ್ರಿ, ಅಜಿಂಕ್ಯಾ ರೆಹಾನೆ, ಜಸ್ಪ್ರೀತ್ ಬುಮ್ರಾ, ಚೇತೇಶ್ವರ ಪೂಜಾರ ಸೇರಿದಂತೆ ಸಹ ಕ್ರಿಕೆಟಿಗರು ಅಪ್ಪಿಕೊಂಡು ಸ್ವಾಗತ ನೀಡಿದ್ದಾರೆ. ರೋಹಿತ್ ಆಗಮನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳೂ ಹಿಟ್ ಮ್ಯಾನ್ ಆಟವನ್ನು ಮೂರನೇ ಟೆಸ್ಟ್ ಪಂದ್ಯದಲ್ಲಿ ನೋಡಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.