Publish Date: Thu, 26 Oct 2023 (09:30 IST)
Updated Date: Thu, 26 Oct 2023 (09:30 IST)
ಲಕ್ನೋ: ಏಕದಿನ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧ ಮುಂದಿನ ಪಂದ್ಯವಾಡಲಿರುವ ಟೀಂ ಇಂಡಿಯಾ ನಿನ್ನೆ ಲಕ್ನೋಗೆ ಬಂದಿಳಿದಿದೆ.
ಅಕ್ಟೋಬರ್ 29 ರಂದು ಇಂಗ್ಲೆಂಡ್ ವಿರುದ್ಧ ಲಕ್ನೋದಲ್ಲಿ ಟೀಂ ಇಂಡಿಯಾ ಮುಂದಿನ ಪಂದ್ಯವಾಡಲಿದೆ. ಈಗಾಗಲೇ ಐದು ಪಂದ್ಯಗಳ ಪೈಕಿ ಐದನ್ನೂ ಗೆದ್ದಿರುವ ಟೀಂ ಇಂಡಿಯಾ ಕಿರು ಬ್ರೇಕ್ ನ ನಂತರ ಮತ್ತೆ ಮೈದಾನಕ್ಕೆ ಮರಳಲಿದೆ.
ಲಕ್ನೋಗೆ ಬಂದಿಳಿದ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಹೋಟೆಲ್ ಸಿಬ್ಬಂದಿ ಮುತ್ತಿನ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತ ನೀಡಿದ್ದಾರೆ. ಕಳೆದ ಪಂದ್ಯವನ್ನು ಧರ್ಮಶಾಲಾದಲ್ಲಿ ಆಡಿದ್ದ ಟೀಂ ಇಂಡಿಯಾ ಕ್ರಿಕೆಟಿಗರು ಅಲ್ಲಿಯೇ ನಾಲ್ಕು ದಿನ ವಿಶ್ರಾಂತಿ ಪಡೆದಿದ್ದಾರೆ. ಇದೀಗ ಹೊಸ ಉತ್ಸಾಹದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಈ ವಿಶ್ವಕಪ್ ಕೂಟದಲ್ಲಿ ಇದುವರೆಗೆ ಒಂದೇ ಸೋಲು ಕಾಣದೇ ಮುನ್ನುಗ್ಗುತ್ತಿರುವ ಏಕೈಕ ತಂಡ ಟೀಂ ಇಂಡಿಯಾವಾಗಿದೆ.