Publish Date: Mon, 06 Nov 2023 (08:30 IST)
Updated Date: Mon, 06 Nov 2023 (08:52 IST)
ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ ಕೂಟದ ಇಂದಿನ ಪಂದ್ಯದಲ್ಲಿ ಸೋತು ಸೊರಗಿರುವ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಪರಸ್ಪರ ಸೆಣಸಾಡಲಿವೆ.
ಈ ಎರಡೂ ತಂಡಗಳಿಗೆ ಸೆಮಿಫೈನಲ್ ಕನಸು ಈಗಾಗಲೇ ಭಗ್ನವಾಗಿದೆ. ಹಾಗಿದ್ದರೂ ಪ್ರತಿಷ್ಠೆ ಉಳಿಸಿಕೊಳ್ಳುವ ದೃಷ್ಟಿಯಿಂದ ಗೆಲುವಿಗಾಗಿ ಶ್ರಮಿಸಲಿದ್ದಾರೆ. ಎರಡೂ ತಂಡಗಳದ್ದು ಸಮಾನ ದುಃಖ.
ಬಾಂಗ್ಲಾದೇಶ ತಂಡದಲ್ಲಿ ಒಂದಿಬ್ಬರು ಬ್ಯಾಟಿಗರು ಬಿಟ್ಟರೆ ಉಳಿದಂತೆ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಮುಗ್ಗರಿಸಿವೆ. ಇನ್ನು, ಲಂಕಾ ತಂಡದ್ದೂ ಇದೇ ಕತೆ. ಇಂದಿನ ಪಂದ್ಯ ನಡೆಯುವ ದೆಹಲಿಯ ಮೈದಾನದಲ್ಲಿ ಪಿಚ್ ಕೊಂಚ ಬೌಲಿಂಗ್ ಗೆ ಸಹಕರಿಸುವ ನಿರೀಕ್ಷೆಯಿದೆ. ಈ ಪಂದ್ಯ ಅಪರಾಹ್ನ 2 ಗಂಟೆಗೆ ನಡೆಯುವುದು.