Publish Date: Mon, 06 Nov 2023 (08:10 IST)
Updated Date: Mon, 06 Nov 2023 (08:43 IST)
ಕೋಲ್ಕೊತ್ತಾ: ದ.ಆಫ್ರಿಕಾ ವಿರುದ್ಧ ಐಸಿಸಿ ಏಕದಿನ ಪಂದ್ಯದಲ್ಲಿ ಸಚಿನ್ ತೆಂಡುಲ್ಕರ್ ಅವರ ಅತ್ಯಧಿಕ ಏಕದಿನ ಶತಕಗಳ ದಾಖಲೆಯನ್ನು ಸರಿಗಟ್ಟಿದ್ದರ ಬಗ್ಗೆ ವಿರಾಟ್ ಕೊಹ್ಲಿ ಮನದಾಳದ ಮಾತು ಹಂಚಿಕೊಂಡಿದ್ದಾರೆ.
ಶತಕ ಸಿಡಿಸಿದ್ದಕ್ಕೆ ಅರ್ಹವಾಗಿಯೇ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಕ್ಕಿದೆ. ಈ ವೇಳೆ ಮಾತನಾಡಿದ ಅವರು ಸಚಿನ್ ನನ್ನ ಹೀರೋ. ನನ್ನ ಹೀರೋ ರೆಕಾರ್ಡ್ ಸರಿಗಟ್ಟಿದ್ದು ನನಗೆ ವಿಶೇಷವಾದ ಕ್ಷಣ ಎಂದಿದ್ದಾರೆ. ಕೊಹ್ಲಿ ಶತಕಗ ತನ್ನ ಶತಕಗಳ ದಾಖಲೆ ಸರಿಗಟ್ಟುತ್ತಿದ್ದಂತೇ ಸಚಿನ್ ಸೋಷಿಯಲ್ ಮೀಡಿಯಾ ಮೂಲಕ ವಿಶೇಷ ಸಂದೇಶ ನೀಡಿ ಅಭಿನಂದಿಸಿದ್ದರು.
ಈ ಬಗ್ಗೆ ಮಾತನಾಡಿರುವ ಕೊಹ್ಲಿ ಸದ್ಯಕ್ಕೆ ನನಗೆ ಇದನ್ನೆಲ್ಲಾ ಜೀರ್ಣಿಸಿಕೊಳ್ಳಲೂ ಕಷ್ಟವಾಗುತ್ತಿದೆ. ನನ್ನ ಹೀರೋನ ದಾಖಲೆ ಸರಿಗಟ್ಟಿದ್ದು ವಿಶೇಷವಾದ ಗಳಿಗೆ. ಬ್ಯಾಟಿಂಗ್ ವಿಚಾರಕ್ಕೆ ಬಂದರೆ ಅವರು ಪರಿಪೂರ್ಣ ಆಟಗಾರ. ನನಗೆ ಇದು ಭಾವುಕ ಕ್ಷಣ. ನಾನು ಯಾವ ಮಟ್ಟದಿಂದ ಇಲ್ಲಿಗೆ ತಲುಪಿದೆ ಎಂಬುದು ನನಗೆ ಗೊತ್ತು. ನಾನು ಅವರ ಆಟವನ್ನು ಟಿವಿಯಲ್ಲಿ ಎಂಜಾಯ್ ಮಾಡುತ್ತಿದ್ದ ಕ್ಷಣ ನೆನಪಿದೆ. ಇಂದು ಅವರಿಂದ ಮೆಚ್ಚುಗೆ ಪಡೆದಿದ್ದು ನಿಜಕ್ಕೂ ವಿಶೇಷ ಎಂದಿದ್ದಾರೆ.