Webdunia - Bharat's app for daily news and videos

Install App

Chinnaswamy stampede: ನಮ್ಮಲ್ಲಿ ಹೀಗಾಗಿರ್ಲಿಲ್ಲಪ್ಪ, ನೋವಿನಲ್ಲೂ ಬೆಂಗಳೂರಿಗೆ ತಿವಿದ ಮುಂಬೈ ಫ್ಯಾನ್ಸ್

Krishnaveni K
ಗುರುವಾರ, 5 ಜೂನ್ 2025 (09:57 IST)
ಬೆಂಗಳೂರು: ಆರ್ ಸಿಬಿ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಮೈದಾನದಲ್ಲಿ ನಡೆದಿದ್ದ ಕಾಲ್ತುಳಿತದ ನೋವಿನಲ್ಲೂ ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳುವವರಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ. ನಮ್ಮಲ್ಲಿ ಹೀಗಾಗಿರಲಿಲ್ಲ ಎಂದು ಮುಂಬೈ ಫ್ಯಾನ್ಸ್ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಬೆಂಗಳೂರಿಗೆ ತಿವಿದಿದ್ದಾರೆ.

ಈ ಮೊದಲು ಟಿ20 ವಿಶ್ವಕಪ್ ಗೆದ್ದ ಬಳಿಕ ಟೀಂ ಇಂಡಿಯಾ ಆಟಗಾರರು ಮುಂಬೈನಲ್ಲಿ ತೆರೆದ ಬಸ್ ನಲ್ಲಿ ಮೆರವಣಿಗೆ ಮಾಡಿದ್ದರು. ಈ ವೇಳೆ ಲಕ್ಷಾಂತರ ಜನ ರಸ್ತೆಯಲ್ಲಿ ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಸೇರಿದ್ದರು.

ಆದರೆ ಆಗ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿತ್ತು. ಹೀಗಾಗಿ ಯಾವುದೇ ದುರಂತ ಸಂಭವಿಸಿರಲಿಲ್ಲ. ಯಾಕೆಂದರೆ ಅಂದು ಆಟಗಾರರ ಮೆರವಣಿಗೆ ಬಗ್ಗೆ ಮುಂಬೈ ಪೊಲೀಸರಿಗೆ ನಾಲ್ಕು ದಿನಗಳ ಮೊದಲೇ ಮಾಹಿತಿಯಿತ್ತು. ಹೀಗಾಗಿ ಪೊಲೀಸರಿಗೂ ತಯಾರಿ ನಡೆಸಲು ಸಾಕಷ್ಟು ಅವಕಾಶ ಸಿಕ್ಕಿತ್ತು. ಇಲ್ಲೂ ತಯಾರಿ ನಡೆಸಲು ಅವಕಾಶ ನೀಡಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಈಗ ಚಿನ್ನಸ್ವಾಮಿ ಮೈದಾನದಲ್ಲಿ ವ್ಯವಸ್ಥೆ ಮಾಡಲು ಸಮಯದ ಕೊರತೆಯಿಂದಲೇ ಈ ದುರಂತ ಸಂಭವಿಸಿದೆ.

ಹೀಗಾಗಿ ಕಮುಂಬೈನ ಅಂದಿನ ಫೋಟೋ ಮತ್ತು ಬೆಂಗಳೂರಿನ ಇಂದಿನ ದುರಂತದ ಫೋಟೋವನ್ನು ಪ್ರಕಟಿಸಿ ನಮ್ಮಲ್ಲಿ ಇಂತಹ ದುರಂತವಾಗಿರಲಿಲ್ಲ ಎಂದಿದ್ದಾರೆ. ಇಂತಹ ನೋವಿನ ಸಂದರ್ಭದಲ್ಲಿಯೂ ಈ ರೀತಿ ಟ್ರೋಲ್ ಮಾಡುತ್ತಿರುವುದು ವಿಪರ್ಯಾಸ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಬಿಸಿಸಿಐ ಷರತ್ತೇನು

ಹೊಟ್ಟೆಯಿಂದಾಗಿ ಮತ್ತೆ ಟ್ರೋಲ್ ಆದ ರೋಹಿತ್ ಶರ್ಮಾ

ಲಂಡನ್ ನಲ್ಲಿದ್ದು ಹೀಗಾದ್ರಾ ವಿರಾಟ್ ಕೊಹ್ಲಿ, ಫೋಟೋ ನೋಡಿ ಶಾಕ್

ಇದನ್ನು ನಂಬಲು ಅಸಾಧ್ಯ, ಸಿರಾಜ್ ಪ್ರದರ್ಶನಕ್ಕೆ ಬೇಷ್ ಎಂದ ಕ್ರಿಕೆಟ್ ದೇವರು ಸಚಿನ್

ENG vs IND Test: ಭಾರತದ ಬೌಲರ್‌ಗಳ ವಿರುದ್ಧ ಗಂಭೀರ ಆರೋಪ ಎಸಗಿದ ಪಾಕ್‌ ವೇಗಿ

ಮುಂದಿನ ಸುದ್ದಿ
Show comments