Select Your Language

Notifications

webdunia
webdunia
webdunia
webdunia

ಚಾಂಪಿಯನ್ಸ್ ಟ್ರೋಫಿ 2025: ಟೀಂ ಇಂಡಿಯಾ ಬೇಕು, ಪಾಕಿಸ್ತಾನ ಹೋದ್ರೂ ಚಿಂತೆಯಿಲ್ಲ

Champions Trophy

Krishnaveni K

ದುಬೈ , ಶನಿವಾರ, 30 ನವೆಂಬರ್ 2024 (10:07 IST)
Photo Credit: X
ದುಬೈ: ಚಾಂಪಿಯನ್ಸ್ ಟ್ರೋಫಿ 2025 ರ ವೇಳಾಪಟ್ಟಿ ಬಗ್ಗೆ ಇರುವ ಗೊಂದಲಗಳು ಇನ್ನೂ ಮುಂದುವರಿದಿದೆ. ಅತ್ತ ಅತಿಥೇಯ ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ಮಾಡಲು ಒಪ್ಪುತ್ತಿಲ್ಲ ಇತ್ತ ಭಾರತ ಸಾಂಪ್ರದಾಯಿಕ ಎದುರಾಳಿ ರಾಷ್ಟ್ರಕ್ಕೆ ಹೋಗಲು ಒಪ್ಪುತ್ತಿಲ್ಲ.

ಇಬ್ಬರ ಜಿದ್ದಾಜಿದ್ದಿಯಿಂದಾಗಿ ನಿನ್ನೆ ಐಸಿಸಿ ಮೀಟಿಂಗ್ ನಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯುವ ಸ್ಥಳದ ಬಗ್ಗೆ ಯಾವುದೇ ತೀರ್ಮಾನವಾಗಲೇ ಇಲ್ಲ. ಟೀಂ ಇಂಡಿಯಾ ಪಾಲ್ಗೊಳ್ಳದೇ ಇದ್ದರೆ ಐಸಿಸಿಗೆ ಆರ್ಥಿಕವಾಗಿ ದೊಡ್ಡ ಹೊಡೆತವೇ ಸರಿ. ಯಾಕೆಂದರೆ ಭಾರತದ ಪಂದ್ಯಗಳನ್ನು ವೀಕ್ಷಿಸಲು ಟಿವಿ ಮತ್ತು ಮೈದಾನದಲ್ಲಿ ಪ್ರೇಕ್ಷಕರು ಕಿಕ್ಕಿರಿದು ತುಂಬಿರುತ್ತಾರೆ. ಹೀಗಾಗಿ ಟೀಂ ಇಂಡಿಯಾವನ್ನು ಬಿಟ್ಟು ಟೂರ್ನಿ ನಡೆಸಲು ಐಸಿಸಿಗೆ ಮನಸ್ಸಿಲ್ಲ.

ಆದರೆ ಈ ಬಾರಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸುತ್ತಿರುವ ಪಾಕಿಸ್ತಾನ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಸಲು ಒಪ್ಪುತ್ತಿಲ್ಲ. ಹೈಬ್ರಿಡ್ ಮಾದರಿ ಎಂದರೆ ಭಾರತ ಆಡಲಿರುವ ಮತ್ತು ಫೈನಲ್ ಪಂದ್ಯವನ್ನು ಮಾತ್ರ ತಟಸ್ಥ ರಾಷ್ಟ್ರದಲ್ಲಿ ನಡೆಸುವುದು. ಆದರೆ ಪಾಕಿಸ್ತಾನ ಕೇವಲ ತನ್ನ ದೇಶದಲ್ಲಿ ಮಾತ್ರ ಟೂರ್ನಿ ಆಯೋಜಿಸುವುದಾಗಿ ಹಠ ಹಿಡಿದು ಕೂತಿದೆ.

ಆದರೆ ಭಾರತಕ್ಕೆ ಪಾಕಿಸ್ತಾನಕ್ಕೆ ಪ್ರವಾಸ ಮಾಡಲು ವಿದೇಶಾಂಗ ಇಲಾಖೆ ಒಪ್ಪಿಗೆಯಿಲ್ಲ. ಇತ್ತೀಚೆಗೆ ಅಲ್ಲಿ ನಡೆಯುತ್ತಿರುವ ರಾಜಕೀಯ ಅರಾಜಕತೆ, ದೊಂಬಿಗಳೂ ಇದಕ್ಕೆ ಕಾರಣ. ಈ ಕಾರಣಕ್ಕೆ ಐಸಿಸಿ, ಟೂರ್ನಿಯ ಆಯೋಜಕತ್ವವನ್ನೇ ಪಾಕಿಸ್ತಾನದಿಂದ ಕಿತ್ತುಕೊಂಡು ಬೇರೆ ದೇಶಕ್ಕೆ ಸ್ಥಳಾಂತರಿಸಿದರೂ ಅಚ್ಚರಿಯಿಲ್ಲ. ಹೀಗಾದಲ್ಲಿ ಪಾಕಿಸ್ತಾನ ತಂಡವನ್ನೇ ಹೊರಗಿಡುವ ಸಾಧ್ಯತೆಯೂ ಇಲ್ಲದಿಲ್ಲ. ಪಾಕಿಸ್ತಾನ ಟೂರ್ನಿಯ ಭಾಗವಾಗದೇ ಇದ್ದರೂ ಸಮಸ್ಯೆಯಿಲ್ಲ, ಆದರೆ ಟೀಂ ಇಂಡಿಯಾವನ್ನುಹೊರಗಿಡಲು ಐಸಿಸಿ ತಯಾರಿಲ್ಲ. ನಾಳೆ ಜಯ್ ಶಾ ಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದು, ಭಾರತದ ಬಲ ಮತ್ತಷ್ಟು ಹೆಚ್ಚಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ಓವರ್‌ನಲ್ಲಿ ನಾಲ್ಕು ಸಿಕ್ಸರ್ ಬಾರಿಸಿ ಅಬ್ಬರಿಸಿದ ಪಾಂಡ್ಯ