ಬಾರ್ಡರ್ ಗವಾಸ್ಕರ್ ಟೆಸ್ಟ್ ಮೊದಲ ಪಂದ್ಯಕ್ಕೆ ಇಬ್ಬರು ಸ್ಟಾರ್ ಆಟಗಾರರು ಅಲಭ್ಯ

Krishnaveni K
ಸೋಮವಾರ, 18 ನವೆಂಬರ್ 2024 (09:42 IST)
ಪರ್ತ್: ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಭಾರತ ತಂಡದ ಇಬ್ಬರು ಸ್ಟಾರ್ ಆಟಗಾರರು ಅಲಭ್ಯರಾಗಲಿದ್ದಾರೆ. ಇದು ಭಾರತ ತಂಡಕ್ಕೆ ದೊಡ್ಡ ಹೊಡೆತವಾಗಲಿದೆ.

ಟೀಂ ಇಂಡಿಯಾ ವಾರಕ್ಕೆ ಮೊದಲೇ ಆಸ್ಟ್ರೇಲಿಯಾಕ್ಕೆ ತೆರಳಿ ಅಭ್ಯಾಸ ಆರಂಭಿಸಿತ್ತು. ಆದರೆ ಇದುವೇ ಮುಳುವಾಯಿತೇನೋ. ಆಟಗಾರರು ಅಭ್ಯಾಸದ ನಡುವೆಯೇ ಗಾಯಗೊಂಡು ತಂಡ ಸಂಕಷ್ಟಕ್ಕೀಡಾಗಿದೆ. ಇಬ್ಬರು ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ಶುಬ್ಮನ್ ಗಿಲ್ ಮೊದಲ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.

ರೋಹಿತ್ ತಮ್ಮ ಪತ್ನಿಯ ಡೆಲಿವರಿ ನಿಮಿತ್ತ ಕೌಟುಂಬಿಕ ಕಾರಣಗಳಿಂದ ಗೈರಾಗಲಿದ್ದಾರೆ. ಆದರೆ ಶುಬ್ಮನ್ ಗಿಲ್ ಅಭ್ಯಾಸದ ವೇಳೆ ಬೆರಳಿಗೆ ಗಾಯ ಮಾಡಿಕೊಂಡಿದ್ದು ಗುಣಮುಖರಾಗಲು ಎರಡು ವಾರ ಬೇಕಾಗುತ್ತದೆ. ಹೀಗಾಗಿ ಎರಡನೇ ಟೆಸ್ಟ್ ನಿಂದ ಅವರು ಹೊರಬಿದ್ದಿದ್ದಾರೆ. ರೋಹಿತ್ ಅನುಪಸ್ಥಿತಿಯಲ್ಲಿ ಗಿಲ್ ಕೂಡಾ ಹೊರಬಿದ್ದಿರುವುದು ತಂಡಕ್ಕೆ ದೊಡ್ಡ ನಷ್ಟವುಂಟು ಮಾಡಿದೆ.

ಆಸ್ಟ್ರೇಲಿಯಾದಂತಹ ದೈತ್ಯ ತಂಡದ ವಿರುದ್ಧ ಆಡುವಾಗ ಬ್ಯಾಟಿಂಗ್ ದುರ್ಬಲವಾಗಿದ್ದರೆ ತಂಡ ಹೇಗೆ ಎದುರಿಸಲಿದೆ ಎನ್ನುವುದೇ ಸವಾಲಾಗಿದೆ. ರೋಹಿತ್, ಗಿಲ್ ಅನುಪಸ್ಥಿತಿಯಲ್ಲಿ ಅನುಭವಿಗಳಾದ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಮೇಲೆ ತಂಡದ ಬ್ಯಾಟಿಂಗ್ ಜವಾಬ್ಧಾರಿ ನಿಭಾಯಿಸಬೇಕಾದ ಹೊಣೆಗಾರಿಕೆಯಿದೆ. ಆದರೆ ಇಬ್ಬರೂ ಕಳಪೆ ಫಾರ್ಮ್ ನಲ್ಲಿರುವುದು ತಂಡಕ್ಕೆ ಚಿಂತೆಯ ವಿಷಯವಾಗಿದೆ. ಹೀಗಾಗಿ ಮೊದಲ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಹೇಗೋ ಎಂಬ ಚಿಂತೆ ಶುರುವಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs WI: ಸಾಯಿ ಸುದರ್ಶನ್ ಗೆ ಬಾಲ್ ತಾನಾಗಿಯೇ ಕೈಯೊಳಗೆ ಬಂದು ಕೂತಿದ್ದು ಹೀಗೆ: video

Video: ಜೈಸ್ವಾಲ್ ದ್ವಿಶತಕ ತಪ್ಪಲು ಶುಭಮನ್ ಗಿಲ್ ಮೋಸ ಕಾರಣ: ಕೊಹ್ಲಿ ನೋಡಿ ಕಲಿಯಿರಿ ಎಂದ ನೆಟ್ಟಿಗರು

ರೋಹಿತ್ ಶರ್ಮಾರನ್ನು ನೋಡಿ ಅತ್ತೇ ಬಿಟ್ಟ ಬಾಲಕ: ಹಿಟ್ ಮ್ಯಾನ್ ರಿಯಾಕ್ಷನ್ ವಿಡಿಯೋ ನೋಡಿ

Video: ರೋಹಿತ್ ಶರ್ಮಾ ಅಭ್ಯಾಸ ನೋಡಲು ದೆಹಲಿ ಟೆಸ್ಟ್ ಪಂದ್ಯಕ್ಕಿಂತಲೂ ಹೆಚ್ಚು ವೀಕ್ಷಕರು

IND vs WI test: ದಿನವಿಡೀ ವೆಸ್ಟ್ ಇಂಡೀಸ್ ಬೌಲರ್ ಗಳ ಬೆವರಿಳಿಸಿದ ಟೀಂ ಇಂಡಿಯಾ ಬ್ಯಾಟಿಗರು

ಮುಂದಿನ ಸುದ್ದಿ
Show comments