Publish Date: Sat, 16 Nov 2024 (16:31 IST)
Updated Date: Sat, 16 Nov 2024 (16:35 IST)
ಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ರಿತಿಕಾ ಸಜ್ ದೇ ದಂಪತಿ ಎರಡನೇ ಮಗುವಿನ ಪೋಷಕರಾಗಿದ್ದಾರೆ ಎಂಬ ಸುದ್ದಿ ಬಂದಿತ್ತು. ಈ ಬಗ್ಗೆ ಈಗ ಅವರೇ ಉತ್ತರ ನೀಡಿದ್ದಾರೆ.
ರೋಹಿತ್ ಶರ್ಮಾ ತಮ್ಮ ಪತ್ನಿಯ ಡೆಲಿವರಿ ಕಾರಣಕ್ಕೆ ಆಸ್ಟ್ರೇಲಿಯಾಕ್ಕೆ ತೆರಳದೇ ಭಾರತದಲ್ಲೇ ಉಳಿದುಕೊಂಡಿದ್ದಾರೆ. ಅವರು ಮೊದಲ ಟೆಸ್ಟ್ ಪಂದ್ಯದಲ್ಲಿ ಭಾಗಿಯಾಗುವುದು ಅನುಮಾನ ಎನ್ನಲಾಗಿತ್ತು. ಆದರೆ ನಿನ್ನೆ ರಾತ್ರಿ ರಿತಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂಬ ಸುದ್ದಿ ಬಂದಿತ್ತು.
ಆದರೆ ರೋಹಿತ್ ದಂಪತಿ ತಕ್ಷಣವೇ ಈ ಬಗ್ಗೆ ಏನೂ ಹೇಳಿರಲಿಲ್ಲ. ಇದೀಗ ಕೊನೆಗೂ ರೋಹಿತ್ ದಂಪತಿ ತಮಗೆ ಪುತ್ರ ಜನಿಸಿರುವ ವಿಚಾರವನ್ನು ಖಚಿತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ರೋಹಿತ್, ನಾವೀಗ ಒಬ್ಬರಿಂದ ನಾಲ್ವರಾಗಿದ್ದೇವೆ ಎಂದು ಫ್ಯಾಮಿಲಿ ಫೋಟೋ ಪ್ರಕಟಿಸಿದ್ದಾರೆ.
ರೋಹಿತ್ ಇಂತಹದ್ದೊಂದು ಫೋಟೋ ಪ್ರಕಟಿಸುತ್ತಿದ್ದಂತೇ ನೆಟ್ಟಿಗರು ಸಾವಿರಾರು ಸಂಖ್ಯೆಯಲ್ಲಿ ಲೈಕ್ಸ್, ಕಾಮೆಂಟ್ ಮಾಡಿ ಅಭಿನಂದನೆ ಸಲ್ಲಿಸುತ್ತಿದ್ದಾರೆ. ರೋಹಿತ್ ದಂಪತಿಗೆ ನಿನ್ನೆಯೇ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಸೇರಿದಂತೆ ಅನೇಕರು ಶುಭ ಹಾರೈಸಿದ್ದರು.