ಮಗನನ್ನು ಬಿಟ್ಟು ಹೋಗಲು ಮನಸ್ಸಿಲ್ಲ, ರೋಹಿತ್ ಶರ್ಮಾ ಮೊದಲ ಟೆಸ್ಟ್ ಗೆ ಗೈರು

Krishnaveni K
ಸೋಮವಾರ, 18 ನವೆಂಬರ್ 2024 (09:32 IST)
Photo Courtesy: Twitter
ಪರ್ತ್: ಇಷ್ಟು ದಿನ ಪತ್ನಿಯ ಹೆರಿಗೆ ಡೇಟ್ ಹತ್ತಿರವಿದೆ ಎಂಬ ಕಾರಣಕ್ಕೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯಕ್ಕೆ ಗೈರಾಗಲಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ಈಗ ಹೆರಿಗೆಯಾಗಿ ಮಗು ಬಂದರೂ ರೋಹಿತ್ ಮೊದಲ ಪಂದ್ಯದಲ್ಲಿ ಭಾಗಿಯಾಗುತ್ತಿಲ್ಲ ಎಂಬುದು ಖಚಿತವಾಗಿದೆ.

ಮೊನ್ನೆಯಷ್ಟೇ ರೋಹಿತ್-ರಿತಿಕಾ ದಂಪತಿ ಗಂಡು ಮಗುವಿನ ಪೋಷಕರಾಗಿದ್ದಾರೆ. ನವಂಬರ್ 22 ರಿಂದ ಪರ್ತ್ ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ರಿತಿಕಾ ಹೆರಿಗೆ ನಿಮಿತ್ತ ರೋಹಿತ್ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿರಲಿಲ್ಲ. ಅವರು ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಲ್ಗೊಳ್ಳುವುದು ಅನುಮಾನ ಎನ್ನಲಾಗಿತ್ತು.

ಆದರೆ ಮೊನ್ನೆ ರಿತಿಕಾಗೆ ಹೆರಿಗೆಯಾಗಿದ್ದು ರೋಹಿತ್ ಈಗ ನಿರಾತಂಕವಾಗಿ ಮೊದಲ ಪಂದ್ಯಕ್ಕೆ ತೆರಳಲಿದ್ದಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಅದು ಸುಳ್ಳಾಗಿದೆ. ಇನ್ನೂ ಪತ್ನಿ, ಮಗನ ಜೊತೆಗಿದ್ದು ಫ್ಯಾಮಿಲಿ ಡ್ಯೂಟಿ ಮಾಡಲು ನಿರ್ಧರಿಸಿರುವ ರೋಹಿತ್ ಮೊದಲ ಪಂದ್ಯಕ್ಕೆ ಲಭ್ಯರಾಗುವುದಿಲ್ಲ ಎಂದು ಖಚಿತವಾಗಿದೆ. ಅವರ ಸ್ಥಾನದಲ್ಲಿ ಜಸ್ಪ್ರೀತ್ ಬುಮ್ರಾ ತಂಡದ ನಾಯಕರಾಗಲಿದ್ದಾರೆ.

ರೋಹಿತ್ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿಲ್ಲ. ಕೆಲವು ದಿನಗಳ ಕಾಲ ಪತ್ನಿ ಜೊತೆ ಕಾಲ ಕಳೆಯಲಿದ್ದಾರೆ.  ಅವರ ಸ್ಥಾನದಲ್ಲಿ ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಅಭ್ಯಾಸದ ವೇಳೆ ಗಾಯಗೊಂಡಿದ್ದ ಕೆಎಲ್ ರಾಹುಲ್ ಚೇತರಿಸಿಕೊಂಡಿದ್ದಾರೆ ಎಂದು ಬಿಸಿಸಿಐ ನಿನ್ನೆ ಪ್ರಕಟಣೆ ನೀಡಿತ್ತು. ಎರಡನೇ ಪಂದ್ಯದ ವೇಳೆಗೆ ರೋಹಿತ್ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಫಾರ್ಮ್ ಕಳೆದುಕೊಂಡಿದ್ದೀರಾ ಎಂದರೆ ಅಳಿಯ ಅಲ್ಲ ಮಗಳ ಗಂಡ ಎಂದ ಸೂರ್ಯಕುಮಾರ್ ಯಾದವ್

ಹರ್ಷಿತ್ ರಾಣಾಗೆ ಮಾತ್ರ ಸ್ಪೆಷಲ್ ಅಭಿನಂದನೆ ಸಲ್ಲಿಸಿದ ಗಂಭೀರ್: ಇದು ಸರೀನಾ ಎಂದ ಫ್ಯಾನ್ಸ್ video

ಮೆಸ್ಸಿ ಕಾರ್ಯಕ್ರಮದ ಮುಖ್ಯ ಆಯೋಜಕ ಶತಾದ್ರು ದತ್ತಗೆ ಬಿಗ್‌ ಶಾಕ್

ಮೆಸ್ಸಿ ಕಾರ್ಯಕ್ರಮಕ್ಕೆ ನಿರಾಕರಣೆ, ಮಮತಾ ಸರ್ಕಾರದ ವಿರುದ್ಧ ರಾಜ್ಯಪಾಲರ ಪ್ರಶ್ನೆ

ಟೀಂ ಇಂಡಿಯಾದ ಮತ್ತೊಬ್ಬ ಆಟಗಾರನನ್ನೂ ಇದ್ದೂ ಇಲ್ಲದಂತೆ ಸೈಡ್ ಲೈನ್ ಮಾಡುತ್ತಿದ್ದಾರಾ ಗಂಭೀರ್

ಮುಂದಿನ ಸುದ್ದಿ
Show comments