ಲಂಡನ್: 2019 ರ ಏಕದಿನ ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್ ನಲ್ಲಿ ಟೀಂ ಇಂಡಿಯಾ ಆಘಾತಕಾರಿ ಸೋಲು ಅನುಭವಿಸಿದ್ದರ ಬಗ್ಗೆ ಇಂಗ್ಲೆಂಡ್ ಕ್ರಿಕೆಟಿಗ ಬೆನ್ ಸ್ಟೋಕ್ಸ್ ತಮ್ಮ ‘ದಿ ಫೈರ್’ ಎಂಬ ಪುಸ್ತಕದಲ್ಲಿ ವಿವಾದಾತ್ಮಕವಾಗಿ ಬರೆದುಕೊಂಡಿದ್ದಾರೆ.
ಧೋನಿ, ಕೊಹ್ಲಿ, ರೋಹಿತ್ ಶರ್ಮಾ ಸೆಮಿಫೈನಲ್ ನಲ್ಲಿ ಬೇಜವಾಬ್ಧಾರಿಯುತವಾಗಿ ಆಡಿದರು. ಅವರ ಆಟದಲ್ಲಿ ಗೆಲುವಿನ ಉದ್ದೇಶವೇ ಇರಲಿಲ್ಲ ಎಂದ ಬೆನ್ ಸ್ಟೋಕ್ಸ್ ಉದ್ದೇಶಪೂರ್ವಕವಾಗಿ ಭಾರತ ಈ ಪಂದ್ಯ ಸೋತಿತು ಎಂಬರ್ಥದಲ್ಲಿ ಬರೆದಿದ್ದಾರೆ.
ಈ ವಿಷಯ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಕೆರಳಿಸಿದೆ. ಈ ವಿಚಾರ ವಿವಾದವಾಗುತ್ತಿದ್ದಂತೇ ಪ್ರತಿಕ್ರಿಯಿಸಿರುವ ಬೆನ್ ನಾನು ಹಾಗೆ ಹೇಳಿಯೇ ಇಲ್ಲ. ಆ ರೀತಿ ನನ್ನ ಪುಸ್ತಕದಲ್ಲಿ ಬರೆದೂ ಇಲ್ಲ. ನನ್ನ ಮಾತುಗಳನ್ನು ತಪ್ಪಾ ಅರ್ಥೈಸಲಾಗಿದೆ ಎಂದಿದ್ದಾರೆ.