ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಮುನ್ನ ಬೆಂಗಳೂರಿನಲ್ಲಿ ಕಡ್ಡಾಯ ಯೋ ಯೋ ಟೆಸ್ಟ್ ಗೆ ಗುರಿಯಾಗಿದ್ದರು.
ಸಾಮಾನ್ಯವಾಗಿ ಯೋ ಯೋ ಟೆಸ್ಟ್ ನ ಫಲಿತಾಂಶವನ್ನು ಆಟಗಾರರು ಬಹಿರಂಗವಾಗಿ ಪ್ರಕಟಿಸುವಂತಿಲ್ಲ. ಆದರೆ ಕೊಹ್ಲಿ ಇನ್ ಸ್ಟಾಗ್ರಾಂನಲ್ಲಿ ಯೋ ಯೋ ಟೆಸ್ಟ್ ಅಂಕಗಳನ್ನು ಬಹಿರಂಗಪಡಿಸಿದ್ದರು.
ಇದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದೆ. ಇದು ಬಿಸಿಸಿಐ ನಿಯಮಗಳ ಉಲ್ಲಂಘನೆಯಾಗಿದೆ. ಈ ಹಿನ್ನಲೆಯಲ್ಲಿ ಬಿಸಿಸಿಐ ಯಾವುದೇ ಆಟಗಾರರೂ ಯೋ ಯೋ ಟೆಸ್ಟ್ ಫಲಿತಾಂಶವನ್ನು ಬಹಿರಂಗಪಡಿಸುವಂತಿಲ್ಲ ಎಂದು ಖಡಕ್ ಸೂಚನೆ ನೀಡಿದೆ.