ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಗೆ ಗೇಟ್ ಪಾಸ್ ನೀಡಿದ ಬಿಸಿಸಿಐ

ಶನಿವಾರ, 14 ಮಾರ್ಚ್ 2020 (10:16 IST)
ಮುಂಬೈ: ಸದಾ ವಿವಾದಾತ್ಮಕ ಹೇಳಿಕೆಗಳು, ಸೋಷಿಯಲ್ ಮೀಡಿಯಾ ಕಾಮೆಂಟ್ ಗಳಿಂದ ಸುದ್ದಿಯಾಗುತ್ತಿದ್ದ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಗೆ ಬಿಸಿಸಿಐ ಗೇಟ್ ಪಾಸ್ ನೀಡಿದೆ.


ಕಳೆದ ಎರಡು ವರ್ಷಗಳಿಂದ ಮಂಜ್ರೇಕರ್ ಬಿಸಿಸಿಐನ ಕಾಮೆಂಟೇಟರ್ ಪ್ಯಾನಲ್ ನಲ್ಲಿ ಸ್ಥಾನ ಪಡೆದಿದ್ದರು. ಆದರೆ ಇದರ ನಡುವೆ ಒಮ್ಮೆ ರವೀಂದ್ರ ಜಡೇಜಾರನ್ನು ಸಾಧಾರಣ ಬೌಲರ್ ಎಂದಿದ್ದು, ಸಹ ಕಾಮೆಂಟೇಟರ್ ಹರ್ಷ ಭೋಗ್ಲೆಯನ್ನು ಟೀಕಿಸಿ ವಿವಾದಕ್ಕೀಡಾಗಿದ್ದರು.

ಅದಲ್ಲದೆ, ಆಗಾಗ ಟ್ವಿಟರ್ ನಲ್ಲಿ ಅವರು ಮಾಡುವ ಕಾಮೆಂಟ್ ಗಳಿಂದ ಟ್ರೋಲ್ ಗೊಳಗಾಗುತ್ತಿದ್ದರು. ಈ ಎಲ್ಲಾ ವಿವಾದದ ಹಿನ್ನಲೆಯಲ್ಲಿ ಅವರಿಗೆ ಬಿಸಿಸಿಐ ಗೇಟ್ ಪಾಸ್ ನೀಡಿದೆ. ಇದರಿಂದಾಗಿ ಮುಂಬರುವ ಐಪಿಎಲ್ ನಲ್ಲೂ ಮಂಜ್ರೇಕರ್ ಕಾಮೆಂಟರಿ ಮಾಡಲ್ಲ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಭಾರತ-ದ.ಆಫ್ರಿಕಾ ಏಕದಿನ ಸರಣಿ ರದ್ದು