Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಶಾಕ್ ಕೊಡಲು ಮುಂದಾದ ಬಿಸಿಸಿಐ

Rohit Sharma-Virat Kohli

Krishnaveni K

ಮುಂಬೈ , ಗುರುವಾರ, 11 ಡಿಸೆಂಬರ್ 2025 (16:12 IST)
ಮುಂಬೈ: ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಬಿಸಿಸಿಐ ಶಾಕ್ ಕೊಡಲು ಮುಂದಾಗಿದೆ. ಯಾವ ವಿಚಾರದಲ್ಲಿ ಈ ಸ್ಟೋರಿ ನೋಡಿ.

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈಗ ಟೆಸ್ಟ್ ಮತ್ತು ಟಿ20 ಫಾರ್ಮ್ಯಾಟ್ ನಿಂದ ನಿವೃತ್ತಿ ಪಡೆದಿದ್ದು ಕೇವಲ ಏಕದಿನ ಮಾದರಿಯಲ್ಲಿ ಮಾತ್ರ ಆಡುತ್ತಿದ್ದಾರೆ. ಈ ಇಬ್ಬರೂ ಭರ್ಜರಿ ಫಾರ್ಮ್ ನಲ್ಲಿದ್ದು ಐಸಿಸಿ ಶ್ರೇಯಾಂಕದಲ್ಲಿ ನಂ.1 ಮತ್ತು ನಂ.2 ಸ್ಥಾನದಲ್ಲಿದ್ದಾರೆ.

ಆದರೆ ಈ ಇಬ್ಬರು ದಿಗ್ಗಜ ಆಟಗಾರರು ಈಗಲೂ ಬಿಸಿಸಿಐ ವೇತನ ಗುತ್ತಿಗೆಯಲ್ಲಿ ಎ ಪ್ಲಸ್ ದರ್ಜೆಯಲ್ಲಿದ್ದಾರೆ. ಮೂರೂ ಮಾದರಿಯ ಕ್ರಿಕೆಟ್ ಆಡುವ ಪ್ರಮುಖ ಆಟಗಾರರಿಗೆ ಮಾತ್ರ ಎ ಪ್ಲಸ್ ದರ್ಜೆಯ ವೇತನ ನೀಡಲಾಗುತ್ತದೆ.

ಆದರೆ ಇದೀಗ ಇಬ್ಬರೂ ಕ್ರಿಕೆಟಿಗರು ಕೇವಲ ಏಕದಿನ ಮಾದರಿ ಮಾತ್ರ ಆಡುತ್ತಿರುವುದರಿಂದ ಇಬ್ಬರನ್ನೂ ಎ ದರ್ಜೆಗೆ ಹಿಂಬಡ್ತಿ ನೀಡಲು ಬಿಸಿಸಿಐ ನಿರ್ಧರಿಸಿದೆ. ಇದರಿಂದ ಇಬ್ಬರೂ ಕ್ರಿಕೆಟಿಗರ ವೇತನದಲ್ಲಿ 2 ಕೋಟಿ ರೂ.ಗಳಷ್ಟು ಕಡಿತವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಎಲ್ಲಾ ಕ್ರಿಕೆಟಿಗರಿಗೂ ಬೇಡದ ಅಭ್ಯಾಸಗಳೆಲ್ಲಾ ಇದೆ: ವಿವಾದಕ್ಕೆ ಕಾರಣವಾದ ರವೀಂದ್ರ ಜಡೇಜಾ ಪತ್ನಿ