Select Your Language

Notifications

webdunia
webdunia
webdunia
webdunia

ಕ್ರಿಕೆಟಿಗರ ಪತ್ನಿಯರನ್ನು ನಿಭಾಯಿಸುವುದೇ ಬಿಸಿಸಿಐಗೆ ದೊಡ್ಡ ತಲೆನೋವಾಗಿದೆಯಂತೆ!

ಕ್ರಿಕೆಟಿಗರ ಪತ್ನಿಯರನ್ನು ನಿಭಾಯಿಸುವುದೇ ಬಿಸಿಸಿಐಗೆ ದೊಡ್ಡ ತಲೆನೋವಾಗಿದೆಯಂತೆ!
ಮುಂಬೈ , ಶನಿವಾರ, 2 ಫೆಬ್ರವರಿ 2019 (09:16 IST)
ಮುಂಬೈ: ವಿದೇಶ ಪ್ರವಾಸ ಹೋಗುವಾಗ ಟೀಂ ಇಂಡಿಯಾ ಕ್ರಿಕೆಟಿಗರ ಜತೆ ತೆರಳುವ ಪತ್ನಿ, ಕುಟುಂಬದವರನ್ನು ನಿಭಾಯಿಸುವುದೇ ಬಿಸಿಸಿಐಗೆ ದೊಡ್ಡ ತಲೆನೋವಾಗಿದೆಯಂತೆ.


ಕಳೆದ ವರ್ಷ ಇದೇ ಕಾರಣಕ್ಕೆ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಕ್ರಿಕೆಟಿಗರು ಬಿಸಿಸಿಐ ಜತೆ ಗುದ್ದಾಟ ನಡೆಸಿದ್ದರು. ಕೊನೆಗೆ ವಿದೇಶ ಪ್ರವಾಸದಲ್ಲಿ ಪತ್ನಿಯರನ್ನೂ ಜತೆಗೆ ಕರೆದೊಯ್ಯಲು ಅವಕಾಶ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಆದರೆ ಬಿಸಿಸಿಐ ವ್ಯವಸ್ಥಾಪಕರಿಗೆ ಇಷ್ಟು ಮಂದಿ ಸದಸ್ಯರಿಗೆ ರೂಂ ವ್ಯವಸ್ಥೆ ಮಾಡುವುದು, ಟಿಕೆಟ್ ವ್ಯವಸ್ಥೆ ಮಾಡುವುದು ಭಾರೀ ತಲೆನೋವಾಗುತ್ತಿದೆಯಂತೆ. ಕಡಿಮೆ ಜನ ಇದ್ದಷ್ಟು ವ್ಯವಸ್ಥೆ ಮಾಡುವುದು ಸುಲಭ. ಆದರೆ ಸದಸ್ಯರು ಜಾಸ್ತಿಯಾಗುತ್ತಿದ್ದಂತೆ ವ್ಯವಸ್ಥೆ ಮಾಡುವುದೇ ಕಷ್ಟವಾಗುತ್ತಿದೆ ಎನ್ನುವುದು ಬಿಸಿಸಿಐ ಅಳಲು.  ಮುಂಬರುವ ವಿಶ್ವಕಪ್ ಸಂದರ್ಭದಲ್ಲಿ ಇಂಗ್ಲೆಂಡ್ ನಲ್ಲಿ ಕ್ರಿಕೆಟಿಗರ ಜತೆಗೆ ಅವರ ಕುಟುಂಬದವರಿಗೂ ಉಳಕೊಳ್ಳಲು ವ್ಯವಸ್ಥೆ ಮಾಡುವ ಬಗ್ಗೆ ಈಗಲೇ ಬಿಸಿಸಿಐ ಅಧಿಕಾರಿಗಳು ತಲೆಕೆಡಿಸಿಕೊಂಡಿದ್ದಾರಂತೆ. ಇದರ ಬಗ್ಗೆ ಇದೀಗ ಬಿಸಿಸಿಐ ವಲಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮ ಗರಡಿಯಲ್ಲಿರುವ ಕೆಎಲ್ ರಾಹುಲ್ ಬಗ್ಗೆ ಬಾಯ್ಬಿಟ್ಟ ರಾಹುಲ್ ದ್ರಾವಿಡ್