ಹೀನಾಯವಾಗಿ ಸೋತ ಟೀಂ ಇಂಡಿಯಾವನ್ನು ಯದ್ವಾ ತದ್ವಾ ಟ್ರೋಲ್ ಮಾಡಿದ ಅಭಿಮಾನಿಗಳು

ಶುಕ್ರವಾರ, 1 ಫೆಬ್ರವರಿ 2019 (09:11 IST)
ಹ್ಯಾಮಿಲ್ಟನ್: ಎಷ್ಟೇ ಗೆದ್ದರೂ ಒಂದೇ ಒಂದು ಹೀನಾಯ ಸೋಲು ಆ ಎಲ್ಲಾ ಸಾಧನೆಗಳನ್ನು ನುಂಗಿ ಹಾಕುತ್ತವೆ ಎನ್ನುವುದಕ್ಕೆ ಭಾರತ ನ್ಯೂಜಿಲೆಂಡ್ ನಡುವಿನ ನಾಲ್ಕನೇ ಏಕದಿನ ಪಂದ್ಯವೇ ಸಾಕ್ಷಿ.


ಇಷ್ಟು ದಿನ ವಿಶ್ವವೇ ಬೆರಗಾಗುವಂತೆ ಆಡಿ ಒಂದಾದ ಮೇಲೊಂದರಂತೆ ಸರಣಿ ಗೆದ್ದ ಟೀಂ ಇಂಡಿಯಾ, ಇದೀಗ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಗೆದ್ದರೂ, ಒಂದು ಪಂದ್ಯ ಸೋತಿದ್ದಕ್ಕೆ  ಅಭಿಮಾನಿಗಳು ಮನಬಂದಂತೆ ಟ್ರೋಲ್ ಮಾಡಿದ್ದಾರೆ.

ಸೋತಿರುವುದು ದೊಡ್ಡದಲ್ಲ. ಆದರೆ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳ ಹೀನಾಯ ಪ್ರದರ್ಶನ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕೊಹ್ಲಿಯಿದ್ದರೆ ಟೀಂ ಇಂಡಿಯಾ ಬ್ಯಾಟಿಂಗ್ ಹುಲಿಯಂತೆ, ಇಲ್ಲದಿದ್ದರೆ ಇಲಿಯಂತೆ ಎಂದು ವ್ಯಂಗ್ಯ ಚಿತ್ರಗಳ ಸಮೇತ ಟ್ವಿಟರಿಗರು ಟ್ರೋಲ್ ಮಾಡಿದ್ದಾರೆ.

ಇನ್ನು ಕೆಲವರು ಧೋನಿಯನ್ನು ಹೊರಗಿಟ್ಟಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧೋನಿಯಿದ್ದಿದ್ದರೆ ಕನಿಷ್ಠ ಪಕ್ಷ ಮರ್ಯಾದೆ ಉಳಿಸುತ್ತಿದ್ದರು. ಅವರನ್ನು ಹೊರಗಿಟ್ಟು ತಂಡ ದೊಡ್ಡ ತಪ್ಪು ಮಾಡಿದೆ ಎಂದು ಹೀಗೆಳೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ದುಡ್ಡಿಲ್ಲದೇ ಒದ್ದಾಡುವ ಯುವ ಕ್ರಿಕೆಟಿಗರ ನೆರವಿಗೆ ಧಾವಿಸಿದ ರಾಹುಲ್ ದ್ರಾವಿಡ್