Select Your Language

Notifications

webdunia
webdunia
webdunia
webdunia

ಇನ್ಮುಂದೆ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಒಂದೇ ವೇತನ: ಬಿಸಿಸಿಐ ಘೋಷಣೆ

ಇನ್ಮುಂದೆ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಒಂದೇ ವೇತನ: ಬಿಸಿಸಿಐ ಘೋಷಣೆ
ಮುಂಬೈ , ಗುರುವಾರ, 27 ಅಕ್ಟೋಬರ್ 2022 (14:51 IST)
ಮುಂಬೈ: ಕ್ರಿಕೆಟ್ ನಲ್ಲಿ ಇದುವರೆಗೆ ಪುರುಷ ಮತ್ತು ಮಹಿಳಾ ಕ್ರಿಕೆಟಿಗರ ವೇತನದಲ್ಲಿ ತಾರತಮ್ಯವಿತ್ತು. ಆದರೆ ಇನ್ಮುಂದೆ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಸಮಾನ ವೇತನ ಸಿಗಲಿದೆ.

ಟೀಂ ಇಂಡಿಯಾ ಕ್ರಿಕೆಟಿಗರು ಈಗ ಒಂದು ಟೆಸ್ಟ್ ಪಂದ್ಯವಾಡಿದರೆ 15 ಲಕ್ಷ ರೂ., ಏಕದಿನ ಪಂದ್ಯವಾಡಿದರೆ 6 ಲಕ್ಷ ರೂ. ಮತ್ತು ಟಿ20 ಕ್ರಿಕೆಟ್ ಆಡಿದರೆ 3 ಲಕ್ಷ ರೂ. ವೇತನ ಪಡೆಯುತ್ತಾರೆ.

ಇನ್ನು ಮುಂದೆ ಗುತ್ತಿಗೆ ಆಧಾರಿತ ಮಹಿಳಾ ಕ್ರಿಕೆಟಿಗರಿಗೂ ಇದೇ ರೀತಿಯ ವೇತನ ಅನ್ವಯವಾಗಲಿದೆ. ಈ ಮೂಲಕ ಪುರುಷ ಮತ್ತು ಮಹಿಳಾ ಕ್ರಿಕೆಟಿಗರ ನಡುವೆ ಸಮಾನತೆ ತರಲು ಬಿಸಿಸಿಐ ಈ ಕ್ರಮಕ್ಕೆ ಮುಂದಾಗಿದೆ. ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಘೋಷಣೆ ಮಾಡಿದ್ದಾರೆ.

-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ರೋಹಿತ್ ಶರ್ಮಾ ಸಿಕ್ಸರ್ ಗಳ ದಾಖಲೆ