Publish Date: Tue, 26 Jan 2021 (08:43 IST)
Updated Date: Tue, 26 Jan 2021 (08:45 IST)
ಸಿಡ್ನಿ: ಒಂದೇ ಬಾಲ್ ನಲ್ಲಿ ಬ್ಯಾಟ್ಸ್ ಮನ್ ಎರಡು ಬಾರಿ ರನೌಟ್ ಆದ ಅಪರೂಪದ ವಿದ್ಯಮಾನ ಬಿಬಿಎಲ್ ಕ್ರಿಕೆಟ್ ನಲ್ಲಿ ನಡೆದಿದೆ.
ಅಡಿಲೇಡ್ ಸ್ಟ್ರೈಕರ್ಸ್ ನ ಜ್ಯಾಕ್ ವೆದರ್ಲಾಡ್ ಈ ರೀತಿ ಒಂದೇ ಬಾಲ್ ನಲ್ಲಿ ಎರಡು ಬಾರಿ ರನೌಟ್ ಆದವರು. ಬ್ಯಾಟಿಂಗ್ ಮಾಡುತ್ತಿದ್ದ ಕ್ರಿಸ್ ಗ್ರೀನ್ ಬಾಲ್ ಹೊಡೆದಾಗ ಅದು ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದ ವೆದರ್ಲಾಡ್ ಬ್ಯಾಟ್ ಸವರಿಕೊಂಡು ಸ್ಟಂಪ್ ಗೆ ತಗುಲಿತ್ತು. ಆದರೂ ಇದನ್ನು ಗಮನಿಸದೇ ಇಬ್ಬರೂ ಬ್ಯಾಟ್ಸ್ ಮನ್ ಗಳು ಮತ್ತೆ ಸಿಂಗಲ್ ರನ್ ಕದಿಯಲು ಓಡಿದರು. ಈ ವೇಳೆ ಮತ್ತೆ ಅವರು ವಿಕೆಟ್ ಕೀಪರ್ ಕೈಯಲ್ಲಿ ರನೌಟ್ ಆದರು.