Publish Date: Tue, 26 Jan 2021 (07:42 IST)
Updated Date: Tue, 26 Jan 2021 (07:43 IST)
ಮುಂಬೈ: ಐಪಿಎಲ್ 2021 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ತನ್ನ ನಾಯಕ ಸ್ಟೀವ್ ಸ್ಮಿತ್, ರಾಬಿನ್ ಉತ್ತಪ್ಪರಂತಹ ಘಟಾನುಘಟಿ ಆಟಗಾರರನ್ನು ಕೈ ಬಿಟ್ಟಿದೆ. ಇದೀಗ ರಾಜಸ್ಥಾನ್ ಗೆ ಪ್ರಬಲ ಬ್ಯಾಟ್ಸ್ ಮನ್ ಗಳ ಅಗತ್ಯವಿದೆ.
ಹೀಗಾಗಿ ಪಂಜಾಬ್ ಕೈ ಬಿಟ್ಟ ಆಸ್ಟ್ರೇಲಿಯಾ ಮೂಲದ ಗ್ಲೆನ್ ಮ್ಯಾಕ್ಸ್ ವೆಲ್ ರನ್ನು ರಾಜಸ್ಥಾನ್ ಖರೀದಿಸುವ ಸಾಧ‍್ಯತೆಯಿದೆ. ಅವರಲ್ಲದೆ, ಆರ್ ಸಿಬಿಯಿಂದ ಹೊರಬಂದಿರುವ ಕ್ರಿಸ್ ಮಾರಿಸ್ ಕೂಡಾ ರಾಜಸ್ಥಾನ್ ಸೇರಿಕೊಳ‍್ಳುವ ಸಾಧ‍್ಯತೆಯಿದೆ. ಇದೀಗ ಮೂವರು ಬ್ಯಾಟ್ಸ್ ಮನ್ ಗಳನ್ನು ರಾಜಸ್ಥಾನ್ ಖರೀದಿಸುವುದಂತೂ ಖಂಡಿತಾ.