Select Your Language

Notifications

webdunia
webdunia
webdunia
webdunia

2007 ರಲ್ಲಿ ಟೀಂ ಇಂಡಿಯಾಗೆ ನೀಡಿದ ಶಾಕ್ ಈ ಬಾರಿ ದ.ಆಫ್ರಿಕಾಗೆ ಕೊಟ್ಟ ಬಾಂಗ್ಲಾದೇಶ

2007 ರಲ್ಲಿ ಟೀಂ ಇಂಡಿಯಾಗೆ ನೀಡಿದ ಶಾಕ್ ಈ ಬಾರಿ ದ.ಆಫ್ರಿಕಾಗೆ ಕೊಟ್ಟ ಬಾಂಗ್ಲಾದೇಶ
ಲಂಡನ್ , ಸೋಮವಾರ, 3 ಜೂನ್ 2019 (10:35 IST)
ಲಂಡನ್: ಬಾಂಗ್ಲಾದೇಶ ಕ್ರಿಕೆಟ್ ತಂಡ ದುರ್ಬಲ ಎದುರಾಳಿ ಎನಿಸಿಕೊಂಡು ವಿಶ್ವಕಪ್ ಕೂಟದಲ್ಲಿ ಭಾಗವಹಿಸುತ್ತಿದ್ದರೂ ಈ ತಂಡವೂ ದೈತ್ಯ ಸಂಹಾರಿ ಎಂದು ಮತ್ತೆ ಸಾಬೀತುಪಡಿಸಿದೆ.


2007 ರ ವಿಶ್ವಕಪ್ ನಲ್ಲಿ ರಾಹುಲ್ ದ್ರಾವಿಡ್ ನೇತೃತ್ವದ ಟೀಂ ಇಂಡಿಯಾವನ್ನು ಲೀಗ್ ಪಂದ್ಯದಲ್ಲಿ ಸೋಲಿಸಿ ವಿಶ್ವಕಪ್ ನಿಂದಲೇ ಹೊರಗಟ್ಟಿದ್ದ ಬಾಂಗ್ಲಾ ಈ ಬಾರಿ ದ.ಆಫ್ರಿಕಾಗೆ ಶಾಕ್ ನೀಡಿದೆ.

ನಿನ್ನೆ ನಡೆದ ಪಂದ್ಯದಲ್ಲಿ ಬಾಂಗ್ಲಾ ತಂಡ ದ.ಆಫ್ರಿಕಾವನ್ನು 21 ರನ್ ಗಳಿಂದ ಸೋಲಿಸಿದೆ. ಈ ಮೂಲಕ ದ.ಆಫ್ರಿಕಾಗೆ ಸತತ ಎರಡು ಸೋಲಿನ ಬರೆ ಸಿಕ್ಕಿದೆ. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 330 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಆಫ್ರಿಕಾ, ಬಾಂಗ್ಲಾ ಬೌಲರ್ ಗಳ ಸಂಘಟಿತ ದಾಳಿಗೆ ತತ್ತರಿಸಿ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 309 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಬಾಂಗ್ಲಾ ಮತ್ತೆ ದೈತ್ಯ ಸಂಹಾರಿ ಎನಿಸಿಕೊಂಡಿತು. ಆಫ್ರಿಕಾಗೆ ಮುಂದಿನ ಪಂದ್ಯ ಜೂನ್ 6 ರಂದು ಟೀಂ ಇಂಡಿಯಾ ವಿರುದ್ಧ ನಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿಖರ್ ಧವನ್ ರ ಈ ಒಂದು ಕೆಲಸ ರೋಹಿತ್ ಶರ್ಮಾಗೆ ಯಾವತ್ತೂ ಫಜೀತಿ ತರುತ್ತದಂತೆ!